ಭಾರಿ ದುರಂತವೊಂದು ಕೂದಲೆಳೆಯಲ್ಲಿ ತಪ್ಪಿದೆ. ವಿಮಾನದಲ್ಲಿ ಸ್ಮಾರ್ಟ್ಫೋನ್ ಗೆ ಬೆಂಕಿ ಹತ್ತಿಕೊಂಡ ಘಟನೆ ಅಮೆರಿಕದ ಅಲಾಸ್ಕಾ ಏರ್‌ಲೈನ್ಸ್ ವಿಮಾನದಲ್ಲಿ ನಡೆದಿದೆ. ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್ ಗೆ ಬೆಂಕಿ ಹತ್ತಿಕೊಂಡ ನಂತರ, ಜನರನ್ನು ರಕ್ಷಿಸಲಾಗಿದೆ.
ಸಿಯಾಟಲ್-ಟಕೋಮಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ. ನ್ಯೂ ಓರ್ಲಿಯನ್ಸ್‌ನಿಂದ ಸಿಯಾಟಲ್‌ಗೆ ಹೋಗುವ ಅಲಾಸ್ಕಾ ಏರ್‌ಲೈನ್ಸ್ ವಿಮಾನದ ಕ್ಯಾಬಿನ್‌ನೊಳಗೆ ಪ್ರಯಾಣಿಕರ ಸೆಲ್‌ಫೋನ್‌ಗೆ ಬೆಂಕಿ ಹೊತ್ತಿಕೊಂಡಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 21 ಫೋನ್ ಗೆ ಬೆಂಕಿ ಹತ್ತಿಕೊಂಡಿತ್ತು.
ಈ ಘಟನೆಯ ಬಗ್ಗೆ ಸ್ಯಾಮ್‌ಸಂಗ್ ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಿಮಾನದಲ್ಲಿ ಸುಮಾರು 128 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು ಎನ್ನಲಾಗಿದೆ. ಘಟನೆ ನಂತ್ರ ಅವರನ್ನು ಬಸ್ ಮೂಲಕ ಟರ್ಮಿನಲ್‌ಗೆ ಕರೆದೊಯ್ಯಲಾಯಿತು. ಯಾವುದೇ ಗಂಭೀರ ಗಾಯವಾಗಿಲ್ಲ. ಘಟನೆ ವೇಳೆ ಪ್ರಯಾಣಿಕರು ಶಾಂತವಾಗಿದ್ದರಿಂದ ನಿಯಂತ್ರಣ ಸುಲಭವಾಯ್ತು ಎಂದು ವಿಮಾನ ನಿಲ್ದಾಣದ ಮೂಲಗಳು ಟ್ವೀಟ್ ಮಾಡಿವೆ.