ದೀಪಾವಳಿ ಶುರುವಾಗಿದೆ. ಹಬ್ಬದ ಸಂದರ್ಭದಲ್ಲಿ ಶಾಪಿಂಗ್ ಮಾಡಲು ಪ್ರತಿಯೊಬ್ಬರೂ ಇಷ್ಟಪಡ್ತಾರೆ. ಆದ್ರೆ ಬ್ಯಾಂಕ್ ಬ್ಯಾಲೆನ್ಸ್ ನೋಡಿ ಸುಮ್ಮನಾಗ್ತಾರೆ. ಹಬ್ಬದ ಶಾಪಿಂಗ್ ಗಾಗಿ ಎಫ್‌ಡಿ ಹಣ ತೆಗೆಯುವುದು ಅಥವಾ ಎಲ್ಐಸಿ ಹಣ ತೆಗೆಯುವುದು ಸೂಕ್ತವಲ್ಲ. ಹಬ್ಬದ ಸಂದರ್ಭದಲ್ಲಿ ಶಾಪಿಂಗ್ ಮಾಡಲು ಬಯಸುವವರಿಗೆ ಇಲ್ಲೊಂದು ಉತ್ತಮ ಆಯ್ಕೆಯಿದೆ. ಸಂಬಳದ ಓವರ್‌ಡ್ರಾಫ್ಟ್ ಮೂಲಕ ಶಾಪಿಂಗ್ ಮಾಡಬಹುದು.
ಕೆಲಸ ಮಾಡ್ತಿರುವವರಿಗೆ ಬ್ಯಾಂಕ್, ಸಂಬಳದ ಓವರ್‌ಡ್ರಾಫ್ಟ್ ಸೌಲಭ್ಯವನ್ನು ನೀಡುತ್ತದೆ. ಗ್ರಾಹಕರ ಖಾತೆಯಲ್ಲಿರುವ ಹಣಕ್ಕಿಂತ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡಬಹುದು. ಸಂಬಳಕ್ಕಿಂತ ಮೂರು ಪಟ್ಟು ಹೆಚ್ಚು ಹಣವನ್ನು ಬ್ಯಾಂಕಿನಿಂದ ತೆಗೆದುಕೊಳ್ಳಬಹುದು. ಖಾತೆಯಲ್ಲಿ ಯಾವುದೇ ಬ್ಯಾಲೆನ್ಸ್ ಇಲ್ಲದಿದ್ದರೂ ಹಣ ವಿತ್ ಡ್ರಾ ಮಾಡಬಹುದು.
ದಾಖಲೆಗಳನ್ನು ಪರಿಶೀಲನೆ ಮಾಡಿದ ನಂತ್ರ ಬ್ಯಾಂಕ್, ಸಂಬಳದ ಓವರ್‌ಡ್ರಾಫ್ಟ್ ನೀಡುತ್ತದೆ. ಇದಕ್ಕೆ ಬಡ್ಡಿ ಪಾವತಿಸಬೇಕಾಗುತ್ತದೆ. ಆದ್ರೆ ಕ್ರೆಡಿಟ್ ಕಾರ್ಡ್‌ಗಳಿಗಿಂತ ಬಡ್ಡಿ ಅಗ್ಗವಾಗಿದೆ. ಪ್ರತಿ ತಿಂಗಳು ಶೇಕಡಾ ಒಂದರಿಂದ ಮೂರರಷ್ಟು ಬಡ್ಡಿ ಪಾವತಿ ಮಾಡಬೇಕು. ಮನೆ, ಎಫ್‌ಡಿ ಅಥವಾ ವಿಮಾ ಪಾಲಿಸಿಯನ್ನು ಆಧಾರವಾಗಿಟ್ಟು ಹಣ ಪಡೆಯಬಹುದು.