ಭಯೋತ್ಪಾದಕ ಸಂಘಟನೆ ಅಲ್-ಖೈದಾವು ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ “ಪ್ರವಾದಿಯ ಗೌರವಕ್ಕಾಗಿ ಹೋರಾಟ”ದ ಹೆಸರಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ.
ಬಿಜೆಪಿಯ ಕೆಲವು ನಾಯಕರು ಪ್ರವಾದಿ ಮಹಮ್ಮದ್ ಬಗ್ಗೆ ಹೇಳಿಕೆ ನೀಡಿದ ನಂತರ ಭುಗಿಲೆದ್ದಿರುವ ವಿವಾದದ ನಡುವೆ ಈ ವಿಚಾರ ಬೆಳಕಿಗೆ ಬಂದಿದೆ.
“ಕೇಸರಿ ಭಯೋತ್ಪಾದಕರು ಈಗ ದೆಹಲಿ, ಬಾಂಬೆ, ಯುಪಿ ಮತ್ತು ಗುಜರಾತ್‌ನಲ್ಲಿ ತಮ್ಮ ಅಂತ್ಯಕ್ಕಾಗಿ ಕಾಯಬೇಕು. ನಮ್ಮ ಪ್ರವಾದಿಯನ್ನು ಅವಮಾನಿಸುವವರನ್ನು ನಾವು ಕೊಲ್ಲುತ್ತೇವೆ ಮತ್ತು ನಮ್ಮ ಪ್ರವಾದಿಯನ್ನು ಅವಮಾನಿಸಲು ಧೈರ್ಯವಿರುವವರ ವರ್ಗದವರನ್ನು ಸ್ಫೋಟಿಸಲು ನಾವು ನಮ್ಮ ದೇಹ ಮತ್ತು ನಮ್ಮ ಮಕ್ಕಳ ದೇಹಗಳೊಂದಿಗೆ ಸ್ಫೋಟಕಗಳನ್ನು ಕಟ್ಟುತ್ತೇವೆ……” ಎಂದು ಪತ್ರದಲ್ಲಿ ಹೇಳಲಾಗಿದೆ.
ಪ್ರವಾದಿ ಕುರಿತ ಹೇಳಿಕೆಯ ವಿವಾದ ಕಳೆದ ಕೆಲವು ದಿನಗಳಿಂದ ತೀವ್ರವಾಗಿದ್ದು ಮಲೇಷ್ಯಾ, ಕುವೈತ್ ಮತ್ತು ಪಾಕಿಸ್ತಾನದಂತಹ ಹಲವಾರು ದೇಶಗಳು ಬಿಜೆಪಿ ನಾಯಕರು ಇತ್ತೀಚೆಗೆ ನೀಡಿದ ಹೇಳಿಕೆಗಳನ್ನು ಖಂಡಿಸಿವೆ.
ಟಿವಿ ಚರ್ಚೆಯೊಂದರಲ್ಲಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಕುರಿತು ಕಾಮೆಂಟ್ ಮಾಡಿದರೆ, ಮತ್ತೊಬ್ಬ ನಾಯಕ ನವೀನ್ ಜಿಂದಾಲ್ ಟ್ವಿಟರ್‌ನಲ್ಲಿ ವಿವಾದಾತ್ಮಕ ಹೇಳಿಕೆ ಪೋಸ್ಟ್ ಮಾಡಿದ್ದರು. ಈ ಮಧ್ಯೆ ಆ ಹೇಳಿಕೆಗಳು ಭಾರತ ಸರ್ಕಾರದ್ದಲ್ಲ ಎಂದು ಕೇಂದ್ರ ಸಮರ್ಥಿಸಿಕೊಂಡಿದೆ.
ಈ ಮುನ್ನ ಆಡಳಿತಾರೂಢ ಬಿಜೆಪಿಯು ತನ್ನ ವಕ್ತಾರೆ ನೂಪುರ್ ಶರ್ಮಾ ಅವರನ್ನು ಅಮಾನತು ಮಾಡಿತ್ತು ಮತ್ತು ಮಾಧ್ಯಮ ಉಸ್ತುವಾರಿ ನವೀನ್ ಜಿಂದಾಲ್ ಅವರನ್ನು ಉಚ್ಚಾಟಿಸಿತ್ತು.