alex Certify ‘ತಾರೆ ಜಮೀನ್ ಪರ್’ ಚಿತ್ರದ ಇಂಟ್ರಸ್ಟಿಂಗ್ ಸಂಗತಿಯೊಂದನ್ನು ಬಿಚ್ಚಿಟ್ಟ ಅಕ್ಷಯ್ ಖನ್ನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ತಾರೆ ಜಮೀನ್ ಪರ್’ ಚಿತ್ರದ ಇಂಟ್ರಸ್ಟಿಂಗ್ ಸಂಗತಿಯೊಂದನ್ನು ಬಿಚ್ಚಿಟ್ಟ ಅಕ್ಷಯ್ ಖನ್ನಾ

ಅಮೀರ್ ಖಾನ್ ಅಭಿನಯದ ‘ತಾರೆ ಜಮೀನ್ ಪರ್’ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಸಾಧಿಸಿತ್ತು. ಬಾಲಕನೊಬ್ಬನಲ್ಲಿ ಅಡಗಿದ್ದ ಸುಪ್ತ ಕಲೆಯನ್ನು ಗುರುತಿಸುವ ಶಿಕ್ಷಕನ ಪಾತ್ರದಲ್ಲಿ ಅಮೀರ್ ಖಾನ್ ಅಭಿನಯಿಸಿದ್ದು, ಇಶಾನ್ ಪಾತ್ರದ ಬಾಲಕನ ಅಭಿನಯವೂ ಅದ್ಭುತವಾಗಿತ್ತು.

ಇದೀಗ ಸಂದರ್ಶನ ಒಂದರಲ್ಲಿ ನಟ ಅಕ್ಷಯ್ ಖನ್ನಾ, ‘ತಾರೆ ಜಮೀನ್ ಪರ್’ ಚಿತ್ರದ ಇಂಟ್ರಸ್ಟಿಂಗ್ ಸಂಗತಿ ಒಂದನ್ನು ಹಂಚಿಕೊಂಡಿದ್ದಾರೆ. ಅಕ್ಷಯ್ ಖನ್ನಾ ಪ್ರಸ್ತುತ ‘ದೃಶ್ಯಂ 2’ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಇದರಲ್ಲಿ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಕುರಿತು ಸಂದರ್ಶನದ ವೇಳೆ ಅಕ್ಷಯ್ ಖನ್ನಾ, ‘ತಾರೆ ಜಮೀನ್ ಪರ್’ ಚಿತ್ರದ ಸಂಗತಿ ಹೇಳಿದ್ದಾರೆ.

ವಾಸ್ತವವಾಗಿ ‘ತಾರೆ ಜಮೀನ್ ಪರ್’ ಚಿತ್ರದಲ್ಲಿ ಅಮೀರ್ ಖಾನ್ ಬದಲಿಗೆ ಅಕ್ಷಯ್ ಖನ್ನಾ ಅಭಿನಯಿಸಬೇಕಿತ್ತಂತೆ. ಚಿತ್ರದ ನಿರ್ಮಾಪಕ ಅಮೋಲ್ ಗುಪ್ತೆ, ಸ್ಕ್ರಿಪ್ಟ್ ಕುರಿತು ಅಮೀರ್ ಖಾನ್ ಅಭಿಪ್ರಾಯ ಕೇಳಲು ಹೋದಾಗ ಅವರು ಅದನ್ನು ಅಪಾರವಾಗಿ ಇಷ್ಟಪಟ್ಟು ತಾವೇ ಅಭಿನಯಿಸುವುದಾಗಿ ಹೇಳಿದರಂತೆ.

ಹೀಗಾಗಿ ತಮಗೆ ‘ತಾರೆ ಜಮೀನ್ ಪರ್’ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಗಲಿಲ್ಲ ಎಂದು ಹೇಳಿರುವ ಅಕ್ಷಯ್ ಖನ್ನಾ, ಅಮೀರ್ ಖಾನ್ ಅವರಿಗಿಂತ ಉತ್ತಮವಾಗಿ ನಾನು ಕೆಲಸ ಮಾಡುತ್ತಿದ್ದೆ ಎಂದು ಭಾವಿಸುವುದಿಲ್ಲ. ಅವರ ಅಭಿನಯ ಅದ್ಭುತವಾಗಿತ್ತು ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...