
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಹಿಂದಿ ಚಿತ್ರ ಬೆಲ್ ಬಾಟಮ್ ಅನ್ನು ದುಬೈ, ಸೌದಿ ಅರೇಬಿಯಾ, ಕತಾರ್ ಹಾಗೂ ಕುವೈತ್ ನಲ್ಲಿ ನಿಷೇಧಿಸಲಾಗಿದೆ.
ಭಾರತದಲ್ಲಿ ಕೊರೋನಾ 2ನೇ ಅಲೆ ತಗ್ಗುತ್ತಿದ್ದಂತೆ ಚಿತ್ರಮಂದಿರಗಳತ್ತ ಜನರು ಕಾಲಿಡುತ್ತಿದ್ದಾರೆ. ಈ ನಡುವೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ಚಿತ್ರವಾದ ಬೆಲ್ ಬಾಟಂ ಬಗ್ಗೆ ಉತ್ತಮವಾದ ವಿಮರ್ಷೆಗಳು ಬಂದಿವೆ. ಆದರೆ ಯುಎಇ ನಲ್ಲಿ ಈ ಸಿನಿಮಾ ಪ್ರದರ್ಶನಕ್ಕೆ ಒಪ್ಪಿಗೆ ನೀಡಿಲ್ಲ.
ರಂಜಿತ್ ತಿವಾರಿ ನಿರ್ದೇಶಿಸಿರುವ ಬೆಲ್ ಬಾಟಂ ಚಿತ್ರವು, ಇಂದಿರಾ ಗಾಂಧಿ ಭಾರತದ ಪ್ರಧಾನಿಯಾಗಿದ್ದ ಸಮಯದಲ್ಲಿ ನಡೆದ ನೈಜ ಘಟನೆಗಳಿಂದ ಸ್ಪೂರ್ತಿ ಪಡೆದು ನಿರ್ಮಿಸಲಾಗಿದೆ. ಈ ಚಲನಚಿತ್ರವು 1984ರ ವಿಮಾನ ಅಪಹರಣದ ಕಥೆಯನ್ನು ವಿವರಿಸುತ್ತದೆ. ಇದರಲ್ಲಿ ಪ್ರತ್ಯೇಕವಾದಿಗಳ ತಂಡ ಮೊದಲು ಲಾಹೋರ್ ನಲ್ಲಿ ವಿಮಾನವನ್ನು ಇಳಿಸಿ ನಂತರ ದುಬೈಗೆ ಕೊಂಡೊಯ್ದಿತು.
ಬೀಚ್ ನಲ್ಲಿ ಯುವತಿ ಯೋಗ ಮಾಡುತ್ತಿದ್ದಾಗಲೇ ನಡೆಯಿತು ಶಾಕಿಂಗ್ ಘಟನೆ
ಬೆಲ್ ಬಾಟಂ ಎಂಬ ಕೋಡ್ ಹೆಸರಿನೊಂದಿಗೆ ರಾ ಏಜೆಂಟ್ ದುಬೈನಲ್ಲಿ ಕಾರ್ಯಾಚರಿಸಿ ಪ್ರಯಾಣಿಕರನ್ನು ರಕ್ಷಿಸುವ ರೋಚಕ ಕಥಾ ಹಂದರ ಈ ಸಿನಿಮಾದಲ್ಲಿದೆ. ಆದರೂ, ಯುಎಇ ಅಧಿಕಾರಿಗಳು ಸಿನಿಮಾದಲ್ಲಿ ವಾಸ್ತವಿಕ ದೋಷಗಳ ಕಾರಣ ನೀಡಿ ಸಿನಿಮಾ ಬಿಡುಗಡೆಯನ್ನು ನಿಷೇಧಿಸಿದ್ದಾರೆ.
ಯುಎಇ ಅಧಿಕಾರಿಗಳ ಪ್ರಕಾರ, 1984ರ ವಿಮಾನ ಅಪಹರಣದ ಘಟನೆಯಲ್ಲಿ ಭಾರತೀಯ ಪ್ರಯಾಣಿಕರನ್ನು ರಕ್ಷಿಸಲು ಹಾಗೂ ಅಪಹರಣಕಾರರ ಸೆರೆಹಿಡಿಯಲು, ಅಂದಿನ ರಕ್ಷಣಾ ಮಂತ್ರಿಯಾಗಿದ್ದ ಮೊಹಮ್ಮದ್ ಬಿನ್ ರಶಿ ಅಲ್ ಮಕ್ತೌಮ್ ಅವರ ನೇತೃತ್ವದಲ್ಲಿ ಸಂಪೂರ್ಣ ಕಾರ್ಯಾಚರಣೆ ನಡೆಸಲಾಗಿತ್ತು ಅನ್ನೋದನ್ನು ಪ್ರತಿಪಾದಿಸಿದ್ದಾರೆ.
ಇನ್ನು ಚಿತ್ರದಲ್ಲಿ ಅಕ್ಷಯ್ ಮಾತ್ರವಲ್ಲದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಲಾರಾ ದತ್ತಾ ಕಾಣಿಸಿಕೊಂಡಿದ್ದು, ಆಕೆಯ ಅದ್ಭುತ ಅಭಿನಯಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸಿನಿಮಾದಲ್ಲಿ ಆದಿಲ್ ಹುಸೇನ್, ವಾಣಿ ಕಪೂರ್ ಹಾಗೂ ಹುಮಾ ಖುರೇಷಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.