
2022ಕ್ಕೆ ಆಸ್ತಿಕವಾಗಿ ಚಾಲನೆ ಕೊಟ್ಟಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಾಲ್ಡೀವ್ಸ್‌ನಲ್ಲಿ ಗಾಯತ್ರಿ ಮಂತ್ರ ಪಠಿಸುತ್ತಿರುವ ತಮ್ಮ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
“ಹೊಸ ವರ್ಷ, ನಾನು ಮಾತ್ರ ಹಾಗೇ ಇದ್ದೇನೆ. ಎದ್ದೊಡನೆಯೇ ನನ್ನ ಹಳೆಯ ಮಿತ್ರ ಸೂರ್ಯನಿಗೆ ಗ್ರೀಟ್ ಮಾಡಿ ನನ್ನ 2022ನ್ನು ಎಲ್ಲಾ ಪಾಸಿಟಿವ್ ವಿಷಯಗಳೊಂದಿಗೆ ಶುರು ಮಾಡಿದೆ, ಕೋವಿಡ್ ಹೊರತುಪಡಿಸಿ. ಎಲ್ಲರ ಆರೋಗ್ಯ ಮತ್ತು ಸಂತಸಕ್ಕಾಗಿ ಪ್ರಾರ್ಥಿಸುತ್ತಿರುವೆ. ಹೊಸ ವರ್ಷದ ಶುಭಾಶಯ!” ಎಂದು ಅಕ್ಷಯ್ ಕುಮಾರ್ ಕ್ಯಾಪ್ಷನ್ ಬರೆದಿದ್ದಾರೆ.
54-ವರ್ಷದ ನಟನ ಮುಂದೆ ಈ ವರ್ಷ ಸಾಲು ಸಾಲು ಚಿತ್ರಗಳು ಇವೆ. ’ಪೃಥ್ವಿರಾಜ್’, ’ಬಚ್ಚನ್ ಪಾಂಡೆ’, ’ರಕ್ಷಾ ಬಂಧನ್’, ’ರಾಮ್ ಸೇತು’ ಮತ್ತು ’ಓಎಂಜಿ 2: ಓಹ್ ಮೈ ಗಾಡ್ 2’ ಚಿತ್ರಗಳ ಪ್ರಾಜೆಕ್ಟ್‌ಗಳು ಅಕ್ಷಯ್ ಮುಂದೆ ಇವೆ.