alex Certify BIG NEWS: ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸಿದ ಹೆಗ್ಗಳಿಕೆಗೆ ಮತ್ತೊಮ್ಮೆ ಪಾತ್ರರಾದ ಬಾಲಿವುಡ್ ನಟ ಅಕ್ಷಯ್ ಕುಮಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸಿದ ಹೆಗ್ಗಳಿಕೆಗೆ ಮತ್ತೊಮ್ಮೆ ಪಾತ್ರರಾದ ಬಾಲಿವುಡ್ ನಟ ಅಕ್ಷಯ್ ಕುಮಾರ್

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸುವವರ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ವರ್ಷಕ್ಕೆ ನಾಲಕ್ಕರಿಂದ ಐದು ಸಿನಿಮಾಗಳನ್ನು ಮಾಡುವ ಅವರು ಸಿರಿವಂತ ಬಾಲಿವುಡ್ ನಟರಾಗಿದ್ದಾರೆ.

ಆದಾಯ ತೆರಿಗೆ ಪಾವತಿಯಲ್ಲೂ ಸಹ ಅಕ್ಷಯ್ ಕುಮಾರ್ ಮುಂಚೂಣಿಯಲ್ಲಿದ್ದು, ಸತತ ಐದು ವರ್ಷಗಳಿಂದ ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸುವ ಬಾಲಿವುಡ್ ನಟರಲ್ಲಿ ಮೊದಲಿಗರಾಗಿದ್ದಾರೆ. ಹೀಗಾಗಿ ಆದಾಯ ತೆರಿಗೆ ಇಲಾಖೆ ಅವರಿಗೆ ಈ ವರ್ಷವೂ ಸಹ ‘ಸನ್ಮಾನ ಪತ್ರ’ವನ್ನು ನೀಡಿದೆ.

ಪ್ರಸ್ತುತ ಅಕ್ಷಯ್ ಕುಮಾರ್ ತಮ್ಮ ಮುಂಬರುವ ಜಸ್ವಂತ್ ಸಿಂಗ್ ಜೀವನ ಚರಿತ್ರೆ ಆಧಾರಿತ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಯುಕೆ ನಲ್ಲಿ ಇದ್ದಾರೆ. ಅವರ ಬಹು ನಿರೀಕ್ಷಿತ ರಕ್ಷಾ ಬಂಧನ ಸಿನಿಮಾ ಆಗಸ್ಟ್ 11ರಂದು ತೆರೆಗೆ ಬರಲಿದೆ. ಆದರೆ ಇದೇ ದಿನದಂದು ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ತೆರೆ ಕಾಣಲಿದ್ದು, ಯಾವ ಚಿತ್ರಕ್ಕೆ ಪ್ರೇಕ್ಷಕರು ಮನ್ನಣೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...