
ಬೆಂಗಳೂರು: ಕೃಷಿ ಪಂಪ್ ಸೆಟ್ ಅಕ್ರಮ- ಸಕ್ರಮ ಯೋಜನೆಯಡಿ 2023ರ ನವೆಂಬರ್ ಗಡುವಿನವರೆಗೆ ಸುಮಾರು 4.50 ಲಕ್ಷ ಅರ್ಜಿಗಳು ಸಲ್ಲಿಕೆ ಸಲ್ಲಿಕೆಯಾಗಿದ್ದು, ಇದುವರೆಗೆ 2 ಲಕ್ಷ ಪಂಪ್ಸೆಟ್ ಗಳನ್ನು ಸಕ್ರಮಗೊಳಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ .ಜಾರ್ಜ್ ಹೇಳಿದ್ದಾರೆ.
ಅಧಿವೇಶನದಲ್ಲಿ ಜೆಡಿಎಸ್ ಸದಸ್ಯ ಸಿ.ಬಿ. ಸುರೇಶ್ ಬಾಬು ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಒಂದು ವರ್ಷದೊಳಗೆ ಕೃಷಿ ಪಂಪ್ಸೆಟ್ ಅಕ್ರಮ -ಸಕ್ರಮ ಯೋಜನೆಯಡಿ ಬಾಕಿ ಉಳಿದ ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.
3000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಿ ಕೃಷಿ ಪಂಪ್ಸೆಟ್ ಗಳಿಗೆ ಬಳಸುವ ಗುರಿಯಿದೆ. ಟ್ರಾನ್ಸ್ಫಾರ್ಮರ್ ಬ್ಯಾಂಕ್ ಮಾಡಲಾಗಿದ್ದು, ಎಲ್ಲೆಡೆ ಅಗತ್ಯಕ್ಕಿಂತ ಹೆಚ್ಚು ಟ್ರಾನ್ಸ್ಫಾರ್ಮರ್ ಗಳ ದಾಸ್ತಾನು ಇದೆ. ದೂರು ಬಂದ 48 ಗಂಟೆಯೊಳಗೆ ಟಿಸಿ ಬದಲಾವಣೆಗೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.