alex Certify ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ಅಖಿಲೇಶ್​ ಯಾದವ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ಅಖಿಲೇಶ್​ ಯಾದವ್​

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವ ನಡುವೆಯೇ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಮಾಜಿ ಸಿಎಂ ಕೂಡ ಆಗಿರುವ ಅಖಿಲೇಶ್​ ಯಾದವ್​ ಮುಂದಿನ ವರ್ಷದ ಚುನಾವಣೆಗೆ ಎಸ್​ಪಿ ಹಾಗೂ ಆರ್​ಎಲ್​ಡಿ ಮೈತ್ರಿ ಅಂತಿಮವಾಗಿದೆ ಎಂದು ಹೇಳಿದ್ದಾರೆ.

ನಮ್ಮ ಹಾಗೂ ಆರ್​ಎಲ್​ಡಿ ನಡುವಿನ ಮೈತ್ರಿ ಅಂತಿಮವಾಗಿದೆ. ಸೀಟು ಹಂಚಿಕೆಯೊಂದೇ ಬಾಕಿ ಉಳಿದಿದೆ ಎಂದು ಅಖಿಲೇಶ್​ ಯಾದವ್​ ಹೇಳಿದ್ದಾರೆ.
ಅಝಂಘರ್​ನ ಸಂಸದ ಕೂಡ ಆಗಿರುವ ಯಾದವ್​, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

ಮುಂದಿನ ವರ್ಷದ ಚುನಾವಣೆಯಲ್ಲಿ ಸಂಬಂಧಿ ಶಿವಪಾಲ್​ ಯಾದವ್​​ ಅವರ ಪ್ರಗತಿಶೀಲ ಸಮಾಜವಾದಿ ಪಕ್ಷ ಲೋಹಿಯಾವನ್ನು ಸೇರಿಸಿಕೊಳ್ಳುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಯಾದವ್​, ನನಗೆ ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಶಿವಪಾಲ್​ ಹಾಗೂ ಅವರ ಆಪ್ತರಿಗೆ ಸೂಕ್ತ ಗೌರವ ನೀಡಲಾಗುತ್ತದೆ ಎಂದು ಹೇಳಿದ್ರು.

2017ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 47 ಸೀಟುಗಳನ್ನು ಗೆಲ್ಲಲಷ್ಟೇ ಶಕ್ತವಾಗಿದ್ದ ಸಮಾಜವಾದಿ ಪಕ್ಷ ಮೂಲಕ ಉತ್ತರ ಪ್ರದೇಶ ಅಧಿಕಾರದ ಚುಕ್ಕಾಣಿಯನ್ನು ವಾಪಸ್​ ಪಡೆಯುವಲ್ಲಿ ವಿಫಲವಾಗಿತ್ತು. 312 ಸೀಟುಗಳನ್ನು ಗೆದ್ದಿದ್ದ ಬಿಜೆಪಿ 2017ರಲ್ಲಿ ಉತ್ತರ ಪ್ರದೇಶದ ಅಧಿಕಾರ ವಹಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...