ಬೆಂಗಳೂರು : ಕಾವೇರಿ ಹೋರಾಟಕ್ಕಾಗಿ ನಾಡಿದ್ದು ಸೆ.27 ರಂದು ‘ಅಖಂಡ ಕರ್ನಾಟಕ ಬಂದ್’ ಗೆ ಕರೆ ನೀಡಲಾಗಿದ್ದು, 100ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದೆ.
ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ಮಾಡುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಹಿರಿಯ ಚಳವಳಿಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಾಡಿದ್ದು ಅಂದರೆ ಸೆಪ್ಟೆಂಬರ್ 29ರಂದು ಶುಕ್ರವಾರ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲವನ್ನ ಘೋಷಿಸಿದ್ವು. ಪ್ರಮುಖವಾಗಿ ಹೋಟೆಲ್ ಅಸೋಸಿಯೇಷನ್, ಖಾಸಗಿ ವಾಹನ ಮಾಲೀಕರ ಸಂಘಟನೆಗಳು, ಒಲಾ ಊಬರ್ ಸಂಘಟನೆಗಳು ಕರ್ನಾಟಕ ಬಂದ್ ಗೆ ಬೆಂಬಲ ನೀಡಿದೆ. ಈಗಾಗಲೇ 104 ಸಂಘಟನೆಗಳು ಬೆಂಬಲ ಘೋಷಿಸಿದೆ.
ಲಾರಿ ಮಾಲೀಕರ ಸಂಘ, ಜಲಮಂಡಳಿ ನೌಕರರ ಸಂಘ, ಹೋಟೆಲ್ ಅಸೋಸಿಯೇಷನ್ ಬೆಂಬಲ , ಆದರ್ಶ ಆಟೋ ಯೂನಿಯನ್, ಓಲಾ ಉಬರ್ ಚಾಲಕರ ಸಂಘ, ಕರ್ನಾಟಕ ಕೈಗಾರಿಕೆಗಳ ಸಂಘ, ಕರ್ನಾಟಕ ರಸ್ತೆ ಸಾರಿಗೆ ಕ್ರಿಯಾ ಸಮಿತಿ, ವಿದ್ಯಾರ್ಥಿ ಸಂಘಟನೆಗಳು ಸಾಥ್ ನೀಡಿದೆ.
ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದ ರೈತ ಸಂಘಗಳು ಮತ್ತು ಇತರ ಸಂಘಟನೆಗಳ ಒಕ್ಕೂಟವಾದ ಕರ್ನಾಟಕ ಜಲ ಸಂರಕ್ಷಣಾ ಸಮಿತಿ” ಮಂಗಳವಾರದ ಬೆಂಗಳೂರು ಬಂದ್ ನಡೆದಿದ್ದು, ಇದೀಗ ಸೆಪ್ಟೆಂಬರ್ 29 ರಂದು ರಾಜ್ಯವ್ಯಾಪಿ ಬಂದ್ ಗೆ ನಡೆಯಲಿದೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಸೆಪ್ಟೆಂಬರ್ 29 ರಂದು ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ ಎಂದು ಅವರು ಹೇಳಿದರು. ಯಾವುದೇ ಜಿಲ್ಲೆಯನ್ನು ಬಿಡದೆ ರಾಜ್ಯಾದ್ಯಂತ ಇದನ್ನು ಆಚರಿಸಲಾಗುವುದು. ಸೆಪ್ಟೆಂಬರ್ 29 ರ ಬಂದ್ ಕರೆಯಿಂದ ಹಿಂದೆ ಸರಿಯುವುದಿಲ್ಲ ಎಂದು ನಾಗರಾಜ್ ಹೇಳಿದ್ದಾರೆ. ಎಲ್ಲರೂ ಬಂದ್ ಗೆ ಬೆಂಬಲ ನೀಡಲಿದ್ದಾರೆ. ನಾವು ರಾಜಭವನದ ಮುಂದೆ ಪ್ರತಿಭಟನೆ ನಡೆಸುತ್ತೇವೆ. ನಾವು ರಾಷ್ಟ್ರೀಯ ಹೆದ್ದಾರಿಗಳು ಮತ್ತು ವಿಮಾನ ನಿಲ್ದಾಣಗಳನ್ನು ನಿರ್ಬಂಧಿಸುತ್ತೇವೆ. ಬಸ್ಸುಗಳು, ಟ್ಯಾಕ್ಸಿಗಳು ಮತ್ತು ಆಟೋಗಳು ಬಂದ್ಗೆ ಬೆಂಬಲ ನೀಡಲಿವೆ” ಎಂದು ಅವರು ಹೇಳಿದರು.