10ನೇ ತರಗತಿ ಪರೀಕ್ಷೆ ಮುಗಿದ ಬಳಿಕ ತನ್ನ ತಂದೆ – ತಾಯಿಯೊಂದಿಗೆ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದ ಆಕಾಂಕ್ಷಾ ಪರಶುರಾಮ ಹಾದಿಮನಿ ಎಂಬ ಬಾಲಕಿ ಸಂಬಂಧವೇ ಇಲ್ಲದ ಪ್ರಕರಣದಲ್ಲಿ ಹತ್ಯೆಗೀಡಾಗಿದ್ದಳು. ಆಕೆಯ ತಂದೆ – ತಾಯಿಯೂ ಸಹ ಅಂದು ಕೊಲೆಯಾಗಿದ್ದರು.
ಗದಗದಲ್ಲಿ ನಡೆದಿದ್ದ ಈ ಪ್ರಕರಣ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿತ್ತು. ಆಕಾಂಕ್ಷಾ ಉಳಿದುಕೊಂಡಿದ್ದ ಕುಟುಂಬಸ್ಥರ ಮೇಲೆ ದ್ವೇಷ ಹೊಂದಿದ್ದ ಹಂತಕರು ಅಂದು ಆ ಮನೆಯಲ್ಲಿ ತಂಗಿದ್ದ ಇವರನ್ನೂ ಸಹ ಆ ಕುಟುಂಬದವರೇ ಎಂದು ಭಾವಿಸಿ ಹತ್ಯೆ ಮಾಡಿದ್ದರು.
ನಿನ್ನೆ ಪ್ರಕಟಗೊಂಡ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಆಕಾಂಕ್ಷಾ ಪರಶುರಾಮ ಹಾದಿಮನಿ 359 ಅಂಕ ಗಳಿಸುವ ಮೂಲಕ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾಳೆ. ದುರಂತವೆಂದರೆ ಫಲಿತಾಂಶ ತಿಳಿಯಲು ಆಕಾಂಕ್ಷಾ ಹಾಗೂ ಆಕೆಯ ತಂದೆ – ತಾಯಿಯೇ ಬದುಕುಳಿದಿಲ್ಲ.