ಸತಾರ: ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದಲ್ಲಿ ದೊಡ್ದ ಬದಲಾವಣೆಯಾಗಲಿದೆ. ತೆರೆಮರೆಯಲ್ಲಿ ಆಪರೇಷನ್ ಕಸರತ್ತು ನಡೆದಿದೆ ಎಂದು ಮಾಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ತಿಳಿಸಿದ್ದಾರೆ.
ಮಹಾರಾಷ್ಟ್ರದ ಸತಾರದಲ್ಲಿ ಮಾತನಾಡಿದ ಸಿಎಂ ಏಕನಾಥ್ ಶಿಂಧೆ, ಚುನಾವಣೆ ಬಳಿಕ ನಾನು ಕರ್ನಾಟಕಕ್ಕೆ ಬರುತ್ತೇನೆ. ನಾಥ್ ಮಾದರಿ ಆಪರೇಷನ್ ಎಲ್ಲಾ ಕಡೆ ಫೇಮಸ್ ಆಗಿದೆ. ನಾಥ್ ಮಾದರಿ ಆಪರೆಷನ್ ನಾವು ಏಕನಾಥ್ ಶಿಂಧೆ ಮಾಡಿದ್ದೇವಲ್ಲಾ ಅಂತಹ ಆಪರೇಷನ್. ಕರ್ನಾಟಕದಲ್ಲಿ ನಮ್ಮ ಹಾಗೆ ಏನೇನೋ ನಡೆಯುತ್ತಿದೆ. ತೆರೆಮರೆಯಲ್ಲಿ ಆಪರೇಷನ್ ಗೆ ಆಹ್ವಾನವಿದೆ. ನಾಥ್ ಮಾದರಿ ಆಪರೇಷನ್ ಗೆ ಕರ್ನಾಟಕದಿಂದಲೂ ಆಹ್ವಾನ ಬಂದಿದೆ ಎಂದು ಹೇಳಿದ್ದಾರೆ.
ನಾನು ಬೆಳಗಾವಿಗೆ ಹೋದಾಗ ಅಲ್ಲಿ ಬಿಜೆಪಿ ನಾಯಕರು ನನ್ನನ್ನು ಭೇಟಿಯಾಗಿದ್ದರು. ಕರ್ನಾಟಕದಲಿಯೂ ನಾಥ್ ಮಾದರಿ ಆಪರೇಷನ್ ಗೆ ಮನವಿ ಮಾಡಿದರು ಎಂದಿದ್ದಾರೆ. ಶಿಂಧೆ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.
ರಾಜ್ಯ ರಾಜಕಾರಣದಲ್ಲಿ ಮತ್ತೆ ಮಹತ್ತರ ಬದಲಾವಣೆಯಾಗಲಿದೆ? ಕರ್ನಾಟಕ ಸರ್ಕಾರ ಪತನದ ಬಗ್ಗೆ ಮಹಾ ಸಿಎಂ ಸುಳಿವು ನೀಡಿದ್ದಾರಾ? ಎಂಬ ಚರ್ಚೆ ಆರಂಭವಾಗಿದೆ.