
ಜೀರ್ಣಕ್ರಿಯೆ ಸುಗಮವಾಗಲು ಅಜ್ವೈನ ತುಂಬ ಒಳ್ಳೆಯ ಔಷದಿ. ಅಜ್ವೈನ ಜೊತೆಗೆ ಅದರ ಎಲೆಗಳೂ ಕೂಡ ಅನೇಕ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ನೀಡುತ್ತವೆ. ಅಜ್ವೈನ ಎಲೆಗಳನ್ನು ಜಗಿದು ತಿನ್ನುವುದರಿಂದ ಹೊಟ್ಟೆಯ ನೋವು ಮತ್ತು ಹೊಟ್ಟೆಯ ಇನ್ನಿತರ ಸಮಸ್ಯೆಗಳು ದೂರವಾಗುತ್ತದೆ. ಇದನ್ನು ತಿನ್ನುವುದರಿಂದ ಕಿಬ್ಬೊಟ್ಟೆಯ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.
ಅಜ್ವೈನ ಎಲೆಯ ಚಟ್ನಿ ಮಾಡಿ ಸೇವಿಸಿದರೆ ಗ್ಯಾಸ್ ಸಮಸ್ಯೆ ದೂರವಾಗುತ್ತದೆ. ಇದು ಇಮ್ಯುನಿಟಿ, ಜೀರ್ಣಕ್ರಿಯೆಯನ್ನೂ ಹೆಚ್ಚಿಸುತ್ತದೆ. ಅಜ್ವೈನ ಎಲೆಯನ್ನು ಕಡಲೆಹಿಟ್ಟಿನ ಜೊತೆ ಸೇರಿಸಿ ಬಜ್ಜಿ ತರಹ ಕೂಡ ಸೇವಿಸಬಹುದು.
ಅಜ್ವೈನ ಎಲೆಯನ್ನು ನೀರಿಗೆ ಹಾಕಿ ಅರಿಶಿನ, ಕಾಳುಮೆಣಸಿನ ಪುಡಿ ಹಾಕಿ ಕುದಿಸಿ ಜೇನುತುಪ್ಪ ಬೆರೆಸಿ ಸೇವಿಸಿದರೆ ಕೆಮ್ಮು ಮತ್ತು ಶೀತದ ಲಕ್ಷಣದಿಂದ ಮುಕ್ತಿ ಸಿಗುತ್ತದೆ. ಅಡುಗೆಯ ರುಚಿ ಹೆಚ್ಚಲು ಮತ್ತು ಗ್ಯಾಸ್ ಸಮಸ್ಯೆಯಿಂದ ದೂರವಾಗಲು ಅಜ್ವೈನ ಎಲೆಗಳನ್ನು ತರಕಾರಿಯ ಜೊತೆ ಸೇರಿಸಿ ತಿನ್ನಬಹುದು.