
ಬೆಂಗಳೂರು: ಕರ್ನಾಟಕದಲ್ಲಿಯೂ ಅಜಿತ್ ಪವಾರ್ ಹುಟ್ಟಿದಲ್ಲಿ ಕಾಂಗ್ರೆಸ್ ಸರ್ಕಾರ ಇರಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ವಿಧಾನಸೌಧದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ರಾಜ್ಯದಲ್ಲಿ ಅನೇಕರು ಅಜಿತ್ ಪವಾರ್ ಲಕ್ಷಣ ಹೊಂದಿದವರು ಇದ್ದಾರೆ. ಜಿ. ಪರಮೇಶ್ವರ್, ಡಿ.ಕೆ. ಶಿವಕುಮಾರ್, ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಅವರಲ್ಲಿ ಯಾರು ಬೇಕಾದರೂ ಅಜಿತ್ ಪವಾರ್ ಆಗಬಹುದು ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅನುಭವದ ಆಧಾರದಲ್ಲಿ ಸರ್ಕಾರ ಪತನದ ಬಗ್ಗೆ ಹೇಳಿರಬಹುದು. ಆದರೆ, ಬಿಜೆಪಿ ಆಪರೇಷನ್ ಕಮಲ ಮಾಡುವ ಪ್ರಶ್ನೆಯೇ ಇಲ್ಲ. ಅದರ ಅಗತ್ಯವೂ ಇಲ್ಲ ಎಂದು ತಿಳಿಸಿದ್ದಾರೆ.
ಸ್ಪಷ್ಟ ಜನಾದೇಶ ಪಡೆದುಕೊಂಡಿರುವ ಕಾಂಗ್ರೆಸ್ ಉತ್ತಮ ಆಡಳಿತದೊಂದಿಗೆ ರಾಜ್ಯದ ಅಭಿವೃದ್ಧಿ ಸಾಧಿಸಲಿ ಎಂದು ಬಯಸುತ್ತೇವೆ. ಸರ್ಕಾರದ ಕಾರ್ಯವೈಖರಿಯಿಂದ ಜನರ ನಿರೀಕ್ಷೆ, ವಿಶ್ವಾಸ ಹುಸಿಯಾಗಿದೆ. ಆರ್ಥಿಕವಾಗಿ ದಿವಾಳಿಯಾಗಿರುವ ಸರ್ಕಾರ ತುರ್ತು ಬರ ಪರಿಹಾರ ಕೆಲಸಕ್ಕೂ ಹಣವಿಲ್ಲದೆ ಕೇಂದ್ರದ ಕಡೆ ಬೊಟ್ಟು ಮಾಡಿದೆ. ಬೊಕ್ಕಸ ತುಂಬಿಸಿಕೊಳ್ಳಲು ತೆರಿಗೆ ಹೊರೆ ಹೆಚ್ಚಿಸುತ್ತಿದೆ ಎಂದು ಟೀಕಿಸಿದ್ದಾರೆ.