
ನವದೆಹಲಿ: 3ನೇ ಅವಧಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ(NSA) ಅಜಿತ್ ದೋವಲ್ ನೇಮಕವಾಗಿದ್ದು, ಪಿ.ಕೆ. ಮಿಶ್ರಾ ಪ್ರಧಾನಿ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರೆಯಲಿದ್ದಾರೆ.
ಅಜಿತ್ ದೋವಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಅಡಿಯಲ್ಲಿ ಮೂರನೇ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ(ಎನ್ಎಸ್ಎ) ನೇಮಕಗೊಂಡಿದ್ದಾರೆ. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ದೋವಲ್ ಅವರ ಪ್ರಮುಖ ನೇಮಕಾತಿ ಮಾಡಲಾಗಿದೆ. ಪಿ.ಕೆ. ಐಎಎಸ್(ನಿವೃತ್ತ) ಅಧಿಕಾರಿ ಮಿಶ್ರಾ ಪ್ರಧಾನಿ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಗಳು ಮತ್ತು ಭಾರತ ಎದುರಿಸುತ್ತಿರುವ ಭದ್ರತಾ ಸವಾಲುಗಳ ನಡುವೆ ಅಜಿತ್ ದೋವಲ್ ಅವರ ಮರು ನೇಮಕ ಮಾಡಲಾಗಿದೆ.