ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ’’ಗಂಗೂಬಾಯಿ ಕಾಠಿಯಾವಾಡಿ’’ ಸಿನಿಮಾ ಶೀಘ್ರದಲ್ಲೇ ತೆರೆಕಾಣಲಿದೆ. ಬಾಲಿವುಡ್‌ನಿಂದ ಸದ್ಯ ಹೊರಬರುತ್ತಿರುವ ಬಹುನಿರೀಕ್ಷೆಯ ಚಿತ್ರವಿದು. ದೊಡ್ಡಮಟ್ಟದ ತಾರಾಗಣ ಇರುವ ಈ ಸಿನಿಮಾದ ಮುಖ್ಯ ಪಾತ್ರಧಾರಿ ಯುವ ನಟಿ ಆಲಿಯಾ ಭಟ್.
ಈ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭವು ಇತ್ತೀಚೆಗೆ ಮುಂಬಯಿನಲ್ಲಿ ನಡೆಯಿತು.
ಆ ವೇಳೆ ಸಿನಿಮಾದಲ್ಲಿ ವಿಶೇಷ ಪಾತ್ರವೊಂದರಲ್ಲಿ ಅಭಿನಯಿಸುತ್ತಿರುವ ನಟ ಅಜಯ್ ದೇವಗನ್ ಅವರು ಐಷಾರಾಮಿ ಕಾರಿನಲ್ಲಿ ಎಂಟ್ರಿ ಕೊಟ್ಟರು. ಬರೋಬ್ಬರಿ 6.95 ಕೋಟಿ ರೂ. ಮೌಲ್ಯದ ಈ ಎಸ್‌ಯುವಿ ಕಾರಿನ ಹೆಸರು ’’ ರೋಲ್ಸ್ ರಾಯ್ಸ್ ಕಲ್ಲಿನಾನ್’’.
BIG NEWS: ಉತ್ತರ ಪ್ರದೇಶದಲ್ಲಿ ನಕಲಿ ವ್ಯಾಕ್ಸಿನ್ ದಂಧೆ; ಐವರು ಅರೆಸ್ಟ್
ವಿಶ್ವದಲ್ಲೇ ಕೆಲವೇ ಜನರ ಹತ್ತಿರ ಈ ಕಾರು ಇದೆ. ಈ ಕಾರು ಕಂಡಕೂಡಲೇ ಕುತೂಹಲದಿಂದ ಅದರ ಬಳಿಗೆ ತೆರಳಿ ವೀಕ್ಷಿಸಿದ ನಟಿ ಆಲಿಯಾ ಭಟ್, ಮುಂದಿನ ಬಾರಿ ಈ ಕಾರನ್ನು ತನ್ನದಾಗಿಸಿಕೊಳ್ಳಲು ಮನಸ್ಸಿನಲ್ಲೇ ಸಂಕಲ್ಪ ಮಾಡಿದ್ದಾರೆ. ಅಂದಹಾಗೆ, ಈ ಕಾರನ್ನು 2019ರಲ್ಲಿ ಅಜಯ್ ಖರೀದಿಸಿದ್ದಾರೆ. ಭಾರತದಲ್ಲಿ ಈ ಕಾರು ಹೊಂದಿದ ಮೂರನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಉದ್ಯಮಿ ಮುಕೇಶ್ ಅಂಬಾನಿ, ಟಿ-ಸಿರೀಸ್ ಮ್ಯೂಸಿಕ್ ಕಂಪನಿ ನಿರ್ದೇಶಕ ಭೂಷಣ್ ಕುಮಾರ್ ಬಿಟ್ಟರೆ ಅಜಯ್ ಮಾತ್ರವೇ ಈ ಐಷಾರಾಮಿ ಕಾರು ಹೊಂದಿದ್ದಾರೆ. 2022ರ ಫೆಬ್ರುವರಿ 25ಕ್ಕೆ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಬಿಡುಗಡೆ ಆಗಲಿದೆ. ಇದೊಂದು ಸತ್ಯ ಘಟನೆ ಆಧರಿತ ಚಿತ್ರ. ಗಂಗೂಬಾಯಿ ಎಂಬ ಮಹಿಳೆ ಮುಂಬಯಿನ ವೇಶ್ಯಾವಾಟಿಕೆ ಅಡ್ಡಾದಲ್ಲಿ ದೊಡ್ಡ ಹೆಸರು. ಜತೆಗೆ ಆಕೆಯು ಅಮಾಯಕ ಹೆಣ್ಣುಮಕ್ಕಳಿಗೆ ರಕ್ಷಣೆ ಕೂಡ ಒದಗಿಸಿದ್ದರು ಎಂದು ಹೇಳಲಾಗುತ್ತದೆ.
https://www.youtube.com/watch?v=_fEUFknlFks&feature=youtu.be