
ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಕಳೆದ ತಿಂಗಳಲ್ಲಿ ಕೊರೋನ ಸೋಂಕಿನಿಂದ ಗುಣಮುಖರಾಗಿದ್ರು. ಈಗ ಮತ್ತೆ ಏನಾಯ್ತಪ್ಪ ಎಂದು ಅಭಿಮಾನಿಗಳು ಸಹ ಆತಂಕದಲ್ಲಿದ್ರು. ಆದರೆ ಇದಕ್ಕೆ ಸ್ವತಃ ಐಶ್ವರ್ಯಾ ಉತ್ತರ ನೀಡಿದ್ದು, ಜ್ವರ ಹಾಗೂ ತಲೆತಿರುಗುವಿಕೆ ಹೆಚ್ಚಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯಲ್ಲಿನ ತಮ್ಮ ಫೋಟೊಗಳನ್ನು ಹಂಚಿಕೊಂಡಿರುವ ಐಶ್ವರ್ಯಾ ತಮ್ಮ ಸಮಸ್ಯೆಯನ್ನು ಹೇಳುವುದರ ಜೊತೆಗೆ, ಆಕೆಗೆ ಚಿಕಿತ್ಸೆ ನೀಡಿದ ವೈದ್ಯರ ಬಗ್ಗೆ ಹೇಳಿದ್ದಾರೆ. ನಿರ್ದೇಶಕಿ ಐಶ್ವರ್ಯಾ ಅವರ ಪೋಸ್ಟ್ ನೋಡಿದ ಅಭಿಮಾನಿಗಳು ಆದಷ್ಟು ಬೇಗ ಹುಷಾರಾಗಿ ಎಂದು ಕಾಮೆಂಟ್ ಮೂಲಕ ಹಾರೈಸುತ್ತಿದ್ದಾರೆ.