ಬೆಂಗಳೂರು : ಕನ್ನಡದ ಬಿಗ್ ಬಾಸ್-11 ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಬಿಗ್ ಬಾಸ್ ವಿನ್ನರ್ ಯಾರು..? ಟಾಪ್ 6 ಸ್ಪರ್ಧಿಗಳು ಯಾರು ಎಂಬ ಕುತೂಹಲ ಮನೆ ಮಾಡಿದೆ.
ಈ ವಾರ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ನಡೆದಿದ್ದು, ಬಿಗ್ ಬಾಸ್ ಮನೆಯಿಂದ ಐಶ್ವರ್ಯಾ ಸಿಂಧೋಗಿ ಔಟ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಿಂದ ಅಳುತ್ತಲೇ ಬಂದ ಐಶ್ವರ್ಯಾ ಸಿಂಧೋಗಿಗೆ ಬಿಗ್ ಬಾಸ್ ವಿಶೇಷ ಬೀಳ್ಕೊಡುಗೆ ನೀಡಿದೆ. ಪತ್ರದ ಮೂಲಕ ಐಶ್ವರ್ಯಾಗೆ ಬಿಗ್ ಬಾಸ್ ಎಲಿಮಿನೇಷನ್ ಶಾಕ್ ನೀಡಿದೆ.ತ್ರಿವಿಕ್ರಮ್, ಗೌತಮಿ. ಹನುಮಂಯ, ಮಂಜು. ಮೋಕ್ಷಿತಾ. ಧನರಾಜ್ ಆಚಾರ್, ಚೈತ್ರಾ ಕುಂದಾಪುರ ಸದ್ಯ ಬಿಗ್ ಬಾಸ್ ಮನೆಯಲ್ಲಿ ಉಳಿದಿದ್ದು, ಇವರಲ್ಲಿ ವಿನ್ನರ್ ಯಾರು..? ಮನೆಗೆ ಹೋಗುವವರು ಯಾರು..? ಎಂಬ ಕುತೂಹಲವಿದೆ.