ನಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳು ಆರಾಧ್ಯ ಅವರ 11 ನೇ ವರ್ಷದ ಹುಟ್ಟುಹಬ್ಬದಂದು ಶುಭಕೋರಿ ಪೋಸ್ಟ್ ಮಾಡಿರುವ ಫೋಟೋದಿಂದ ಟ್ರೋಲ್ ಗೆ ಒಳಗಾಗಿದ್ದಾರೆ. ಐಶ್ವರ್ಯಾ ರೈ ಪೋಸ್ಟ್ ಮಾಡಿರುವ ಫೋಟೋದಲ್ಲಿ ಅವರು ತಮ್ಮ ಮಗಳನ್ನು ಚುಂಬಿಸುತ್ತಿದ್ದಾರೆ.
ಪೋಸ್ಟ್ ಜೊತೆಗೆ “ನನ್ನ ಪ್ರೀತಿ…… ನನ್ನ ಜೀವನ. ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಆರಾಧ್ಯ.” ಎಂದು ಬರೆದಿದ್ದು ಚುಂಬನದ ಫೋಟೋದಿಂದಾಗಿ ನೆಟ್ಟಿಗರ ಒಂದು ವಿಭಾಗವು ನಟಿಯನ್ನು ಟ್ರೋಲ್ ಮಾಡಿದೆ.
ನಟಿ ಪೋಸ್ಟ್ ಮಾಡಿರುವ ಫೋಟೋದಲ್ಲಿ ತಾಯಿ, ಮಗಳ ತುಟಿಗೆ ಚುಂಬಿಸಿದ್ದಾರೆ. ಹಾಗಾಗಿ “ಮಗುವಿನ ತುಟಿಗಳಿಗೆ ಚುಂಬನವು ವಿಚಿತ್ರವಾಗಿದೆ” ಎಂದು ಟ್ರೋಲಿಗರು ಕಮೆಂಟ್ ಮಾಡಿದ್ದಾರೆ. “ತುಟಿಗಳ ಮೇಲೆ ಏಕೆ?” ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಆದಾಗ್ಯೂ ಅನೇಕ ಅಭಿಮಾನಿಗಳು ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಅಭಿಷೇಕ್ ಮತ್ತು ಐಶ್ವರ್ಯ ರೈ ಏಪ್ರಿಲ್ 20, 2007 ರಂದು ವಿವಾಹವಾದರು. ದಂಪತಿಗೆ ಪುತ್ರಿ ಆರಾಧ್ಯ ಅವರು 2011 ರಲ್ಲಿ ಜನಿಸಿದರು.