
ಇವರಿಬ್ಬರ ದಾಂಪತ್ಯದ ನಡುವೆ ಬಿರುಕು ಮೂಡಿದೆಯಾ ಎಂಬಂತಹ ಸುದ್ದಿಗಳು ಸಹ ಹರಿದಾಡಿತ್ತು. ಈ ಮಧ್ಯೆ, ಐಶ್ವರ್ಯಾ ತನ್ನ ಗಂಡನ ಮೇಲೆ ಕೋಪಗೊಳ್ಳುವ ಹಳೆಯ ವಿಡಿಯೋ ಇದೀಗ ಇಂಟರ್ನೆಟ್ನಲ್ಲಿ ಮತ್ತೆ ವೈರಲ್ ಆಗಿದೆ.
ಐಶ್ವರ್ಯಾ ರೈ ಬಚ್ಚನ್ ತಮ್ಮ ಪುತ್ರಿ ಆರಾಧ್ಯ ಅವರೊಂದಿಗೆ ಅಭಿಷೇಕ್ ಬಚ್ಚನ್ ಅವರ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ನ ಕಬಡ್ಡಿ ಪಂದ್ಯವೊಂದರಲ್ಲಿ ಭಾಗವಹಿಸಿದ್ದರು.
ಸೊಸೆ ನವ್ಯಾ ನವೇಲಿ ನಂದಾ ಮತ್ತು ಸಿಕಂದರ್ ಖೇರ್ ಕೂಡ ಉಪಸ್ಥಿತರಿದ್ದರು. ಪಂದ್ಯದ ವೇಳೆ ನಟಿ ತನ್ನ ಪತಿಯೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿರುವುದು ಕಂಡುಬಂದಿದೆ. ಅಲ್ಲದೆ, ತನ್ನ ಸೋದರ ಸೊಸೆ ನವ್ಯಾ ಮೇಲೂ ಕೋಪಗೊಂಡಿದ್ದಾರೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ರೆಡ್ಡಿಟ್ ನಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ, ಐಶ್ ಅಭಿಷೇಕ್ ಬಚ್ಚನ್ ರನ್ನು ಕರೆದು ಏನನ್ನೋ ಮಾತನ್ನಾಡಿದ್ದಾರೆ. ತುಂಬಿದ್ದ ವೇದಿಕೆಯಲ್ಲಿ ಇಬ್ಬರಿಗೂ ಕೊಂಚ ವಾಗ್ವಾದ ಉಂಟಾಗಿದೆ. ಏನಾಯಿತು ಎಂದು ನವ್ಯಾ ನವೇಲಿ ಐಶ್ ಜೊತೆ ಕೇಳಲು ಹೋದಾಗ, ಆಕೆಯ ಮೇಲೂ ಸಿಟ್ಟಾಗಿ ಐಶ್ವರ್ಯಾ ವರ್ತಿಸಿದ್ದಾರೆ. ಐಶ್ವರ್ಯಾರ ಈ ವರ್ತನೆಯಿಂದ ನವ್ಯಾ ಸುಮ್ಮನಾಗಿದ್ದಾರೆ. ಬಳಿಕ ಪುತ್ರಿ ಆರಾಧ್ಯ ತನ್ನ ತಾಯಿಯನ್ನು ಸಮಾಧಾನ ಮಾಡುತ್ತಿರುವುದು ಕಂಡುಬಂದಿದೆ.
ಅಂದಹಾಗೆ, ಐಶ್ವರ್ಯಾ ರೈ ಬಚ್ಚನ್ ಕೊನೆಯದಾಗಿ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ 1 ರಲ್ಲಿ ಕಾಣಿಸಿಕೊಂಡರು. ಇದೀಗ ಎರಡನೇ ಅಧ್ಯಾಯ ಪೊನ್ನಿಯಿನ್ ಸೆಲ್ವನ್-2 ರ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಐಶ್ವರ್ಯಾ ರಾಣಿ ನಂದಿನಿ ಪಾತ್ರವನ್ನು ಪುನರಾವರ್ತಿಸಲಿದ್ದಾರೆ.