ʼಬಿಗ್ ಬಿʼ ಅಮಿತಾಬ್ ಪುತ್ರ ಅಭಿಷೇಕ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದ ನಟಿ ಐಶ್ವರ್ಯಾ ರೈ ಬಚ್ಚನ್ ಇದೀಗ ವಿಚ್ಚೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.
ರಿಲಯನ್ಸ್ ಸಮೂಹ ಸಂಸ್ಥೆಗಳ ಮಾಲೀಕ ಮುಕೇಶ್ ಅಂಬಾನಿಯವರ ಪುತ್ರ ಅನಂತ್ ಅಂಬಾನಿ ವಿವಾಹ ಸಮಾರಂಭದ ವೇಳೆ ಅಭಿಷೇಕ್ ಬಚ್ಚನ್ ತಮ್ಮ ತಂದೆ – ತಾಯಿ ಜೊತೆ ಬಂದರೆ, ಐಶ್ವರ್ಯಾ ರೈ ಮಗಳು ಆರಾಧ್ಯ ಜೊತೆ ಪ್ರತ್ಯೇಕವಾಗಿ ಬಂದ ಬಳಿಕ ವಿಚ್ಚೇದನ ವದಂತಿಗೆ ಮತ್ತಷ್ಟು ರೆಕ್ಕೆಪುಕ್ಕ ಮೂಡಿತ್ತು.
ಇದರ ಮಧ್ಯೆ ಐಶ್ವರ್ಯಾ ರೈ ಬಚ್ಚನ್ ಅವರ ದುಬೈ ಕಾರ್ಯಕ್ರಮವೊಂದರಲ್ಲಿ “ಬಚ್ಚನ್” ಉಪನಾಮ ಕೈಬಿಟ್ಟಿರುವುದನ್ನು ನೆಟಿಜನ್ಗಳು ಗಮನಿಸಿದ ನಂತರ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ದುಬೈನಲ್ಲಿ ನಡೆದ ಗ್ಲೋಬಲ್ ವುಮೆನ್ಸ್ ಫೋರಂನಲ್ಲಿ ಭಾಗವಹಿಸಿದ್ದು, ಮಹಿಳೆಯರನ್ನು ಪ್ರೋತ್ಸಾಹಿಸುವ ಅವರ ಅನೇಕ ವೀಡಿಯೊಗಳನ್ನು ದುಬೈ ವುಮೆನ್ ಎಸ್ಟಾಬ್ಲಿಷ್ಮೆಂಟ್ನ ಅಧಿಕೃತ ಇನ್ಸ್ಟಾಗ್ರಾಮ್ ಹಂಚಿಕೊಂಡಿದೆ.
ವೈರಲ್ ವೀಡಿಯೊವೊಂದರಲ್ಲಿ, ನಟಿಯ ಹೆಸರನ್ನು “ಐಶ್ವರ್ಯಾ ರೈ-ಅಂತರರಾಷ್ಟ್ರೀಯ ತಾರೆ” ಎಂದು ಹೈಲೈಟ್ ಮಾಡಲಾಗಿದೆ. ದುಬೈ ವುಮೆನ್ ಎಸ್ಟಾಬ್ಲಿಷ್ಮೆಂಟ್ನ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ ಹಂಚಿಕೊಂಡ ಮತ್ತೊಂದು ವೀಡಿಯೊದಲ್ಲೂ ಇದೇ ರೀತಿ ಉಲ್ಲೇಖಿಸಲಾಗಿದೆ.
ಉಪನಾಮವನ್ನು ತಪ್ಪಾಗಿ ಕೈಬಿಡಲಾಗಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಮಾಡಲಾಗಿದೆಯೇ ಎಂದು ಅಭಿಮಾನಿಗಳ ಪ್ರಶ್ನಿಸುತ್ತಿದ್ದಾರೆ. ಮದುವೆಯ ನಂತರ ಐಶ್ವರ್ಯಾ ಅವರನ್ನು ಬಚ್ಚನ್ ಉಪನಾಮವಿಲ್ಲದೆ ನೋಡುತ್ತಿರುವುದು ಗಮನಿಸಬೇಕಾದ ಸಂಗತಿ.