
ಬೆಂಗಳೂರು: ಐಶ್ವರ್ಯಾ ಗೌಡ ಚಿನ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಶಾಸಕ ವಿನಯ್ ಕುಲಕರ್ಣಿ ಅವರ ಕಾರು ಚಾಲಕನ್ನು ವಿಚಾರಣೆ ನಡೆಸಲಾಗಿದೆ.
ಶಾಸಕ ವಿನಯ್ ಕುಲಕರ್ಣಿ ಕಾರು ಚಾಲಕ ವೀರೇಶ್ ದಳವಾಯಿಯನ್ನು ಎಸಿಪಿ ಭರತ್ ರೆಡ್ದಿ ವಿಚಾರಣೆ ನಡೆಸಿದ್ದಾರೆ. ಐಶ್ವರ್ಯ ಗೌಡ ಗೆ ಸೇರಿದ ಕಾರು ವಿನಯ್ ಕುಲಕರ್ಣಿ ಮನೆಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಾರು ಚಾಲಕನನ್ನು ಪೊಲೀಸರು ವಿಚಾರಣೆ ನಡೆಸಿದ್ದರೆ.
ವಿಚರಣೆ ವೇಳೆ ಬೆನ್ಜ್ ಕಾರಿನ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ವಿನಯ್ ಕುಲಕರಣಿಗೆ ಐಶ್ವರ್ಯ ಗೌಡ ಪರಿಚಯವಿದ್ದು, ಮಹರಾಷ್ಟ್ರಕ್ಕೆ ತೆರಳುವಾಗ ಐಶ್ವರ್ಯ ಗೌಡ ವಿನಯ್ ಕುಲಕರ್ಣಿ ಮನೆಗೆ ಬಂದಿದ್ದರು. ಈ ವೇಳೆ ಕಾರನ್ನು ಬಿಟ್ಟು ವಿಮಾನದಲ್ಲಿ ತೆರಳಿದ್ದರು. ಹಾಗಾಗಿ ವಿನಯ್ ಕುಲಕರ್ಣಿ ಮನೆಯಲ್ಲಿ ಐಶ್ವರ್ಯ ಬೆನ್ಜ್ ಕಾರು ಪತ್ತೆಯಾಗಿದೆ ಎಂದು ವಿಚಾರಣೆ ವೇಳೆ ಚಾಲಕ ಹೇಳಿದ್ದಾಗಿ ತಿಳಿದುಬಂದಿದೆ.