ಏರ್ಟೆಲ್, ಭಾರತೀಯರಿಗೆ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಏರ್ಟೆಲ್ 2021 ರ ಅಂತ್ಯದ ವೇಳೆಗೆ ಹೈ-ಡೆಫಿನಿಷನ್ ಸೆಟ್-ಟಾಪ್ ಬಾಕ್ಸ್ ಗಳ ಆಮದು ನಿಲ್ಲಿಸಲಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಕಂಪನಿ, ಸೆಟ್ ಟಾಪ್ ಬಾಕ್ಸ್ ಗಳ ಉತ್ಪಾದನೆಯನ್ನು ಆರಂಭಿಸಿದೆ. ಇದಕ್ಕಾಗಿ, ಏರ್ಟೆಲ್ ಸ್ಕೈವರ್ತ್ ಎಲೆಕ್ಟ್ರಾನಿಕ್ಸ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.
ಕಂಪನಿ ಈಗಾಗಲೇ ಮಾಡಿರುವ ಆರ್ಡರ್ ಗಳನ್ನು ಸ್ವೀಕರಿಸಲಿದೆ. ಒಪ್ಪಂದ ಡಿಸೆಂಬರ್ 2021 ರ ಅಂತ್ಯದ ವೇಳೆಗೆ ಮುಗಿಯಲಿದೆ. ನಂತ್ರ ಯಾವುದೇ ಹೊಸ ಸೆಟ್ ಅಪ್ ಬಾಕ್ಸ್ ಗಳ ಆಮದು ಮಾಡುವುದಿಲ್ಲ. ನೋಯ್ಡಾದಲ್ಲಿಯೇ ಸೆಟ್ ಅಪ್ ಬಾಕ್ಸ್ ಉತ್ಪಾದನೆ ನಡೆಯಲಿದೆ ಎಂದು ಕಂಪನಿ ಹೇಳಿದೆ.
ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸುದ್ದಿ: ‘ಮೆಟ್ರೋ’ದಲ್ಲಿ ನೇಮಕಾತಿ -ಬಂಪರ್ ಖಾಲಿ ಹುದ್ದೆಗಳ ಭರ್ತಿ
ಜನವರಿ 2022 ರಿಂದ ಭಾರತದಲ್ಲಿ ತಯಾರಾದ ಸೆಟ್ ಅಪ್ ಬಾಕ್ಸ್ ಗಳನ್ನೇ ಏರ್ಟೆಲ್ ಮಾರಾಟ ಮಾಡಲಿದೆ. ಏರ್ಟೆಲ್ ಎಕ್ಸ್ಸ್ಟ್ರೀಮ್ ಆಂಡ್ರಾಯ್ಡ್ 4ಕೆ ಟಿವಿ ಬಾಕ್ಸ್ ಕೂಡ ಇದರಲ್ಲಿ ಇರಲಿದೆ.
ಭಾರತಿ ಏರ್ಟೆಲ್ ಡಿಟಿಎಚ್ ಸಿಇಒ ಸುನಿಲ್ ತಲ್ದಾರ್, ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿಯೇ ಸೆಟ್ ಅಪ್ ಬಾಕ್ಸ್ ಗಳು ಉತ್ಪಾದನೆಯಾಗುವುದ್ರಿಂದ ಆಮದು ಖರ್ಚು ಇರುವುದಿಲ್ಲ. ಹಾಗಾಗಿ ಇದ್ರ ಬೆಲೆಗಳು ಕಡಿಮೆಯಾಗುವ ಸಾಧ್ಯತೆಯಿದೆ.
ಏರ್ಟೆಲ್, ಭಾರತದಲ್ಲಿ ಉತ್ಪಾದನೆ ಶುರು ಮಾಡಲು ಮಹತ್ವದ ಕಾರಣವಿದೆ. ಈವರೆಗೆ ಏರ್ಟೆಲ್, ವಿಯೆಟ್ನಾಂ ಮತ್ತು ಥೈಲ್ಯಾಂಡ್‌ನಿಂದ ಸಾಧನಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಕೊರೊನಾದಿಂದಾಗಿ, ಆಮದಿಗೆ ತೊಂದರೆಯಾಗಿತ್ತು. ಹಾಗಾಗಿ ಏರ್ಟೆಲ್, ಭಾರತದಲ್ಲಿಯೇ ಉತ್ಪಾದನೆ ಶುರು ಮಾಡುವ ನಿರ್ಧಾರ ಕೈಗೊಂಡಿದೆ.