ಟೆಲಿಕಾಂ ಕಂಪನಿಗಳು ಸುಂಕದ ಬೆಲೆಗಳನ್ನು ಏರಿಕೆ ಮಾಡ್ತಿವೆ. ಏರ್ಟೆಲ್ ಕೂಡ ಬೆಲೆ ಏರಿಕೆ ಘೋಷಣೆ ಮಾಡಿದೆ. ವಾರದ ಹಿಂದೆ ಯೋಜನೆ ಬೆಲೆಯಲ್ಲಿ ಬದಲಾವಣೆ ಮಾಡಿದೆ. ಆದ್ರೆ 3ಜಿಬಿ ಡೇಟಾ ಯೋಜನೆಯ ಬೆಲೆಯಲ್ಲಿ ಬದಲಾವಣೆ ಘೋಷಣೆ ಮಾಡಿಲ್ಲ. ಏರ್ಟೆಲ್ ಸದ್ದಿಲ್ಲದೆ 3ಜಿ ಯೋಜನೆಯನ್ನು ಬಂದ್ ಮಾಡಿದೆ.
ಏರ್ಟೆಲ್ ತನ್ನ 3ಜಿಬಿ ದೈನಂದಿನ ಡೇಟಾ ಪ್ಲಾನ್‌ಗಳಾದ 398 ರೂಪಾಯಿ, 499 ರೂಪಾಯಿ ಮತ್ತು 558 ರೂಪಾಯಿ ಪ್ಲಾನ್ ನಿಲ್ಲಿಸಿದೆ. ಏರ್ಟೆಲ್ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಆದ್ರೆ ವೆಬ್‌ಸೈಟ್ ಮತ್ತು ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ನಿಂದ ಈ ಯೋಜನೆಯನ್ನು ತೆಗೆದುಹಾಕಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ನಿರೀಕ್ಷೆಯಲ್ಲಿರುವ ರೈತರಿಗೊಂದು ಮಹತ್ವದ ಮಾಹಿತಿ: ದಾಖಲೆಯಲ್ಲಿ ಈ ಲೋಪಗಳಿದ್ದರೆ ಬರೋದಿಲ್ಲ ಹಣ
398 ರೂಪಾಯಿಗಳ ಪ್ರಿಪೇಯ್ಡ್ ಯೋಜನೆಯಲ್ಲಿ, 28 ದಿನಗಳವರೆಗೆ ಪ್ರತಿದಿನ 3ಜಿಬಿ ಡೇಟಾ ಸಿಗ್ತಿತ್ತು. 558 ರೂಪಾಯಿಗಳ ಪ್ರಿಪೇಯ್ಡ್ ಯೋಜನೆ 56 ದಿನಗಳ ಸಿಂಧುತ್ವದೊಂದಿಗೆ ಬಂದಿತ್ತು. 499 ರೂಪಾಯಿಗಳ ಯೋಜನೆಯಲ್ಲಿ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಕೂಡ ನೀಡಲಾಗ್ತಿತ್ತು. ಇದಲ್ಲದೆ ಯೋಜನೆಯ ಅನಿಯಮಿತ ಕರೆಗಳು, ದಿನಕ್ಕೆ 100 ಎಸ್ಎಂಎಸ್ ಮತ್ತು ವೈಂಕ್ ಮ್ಯೂಸಿಕ್ ಮತ್ತು ಶಾ ಅಕಾಡೆಮಿಯ ಸದಸ್ಯತ್ವ ಸಿಗುತ್ತಿತ್ತು.
ಏರ್ಟೆಲ್ ತನ್ನ ವೆಬ್ಸೈಟ್ ನಲ್ಲಿ 3ಜಿಬಿ ಡೇಟಾದ ಎರಡು ಪ್ಲಾನ್ ಮಾತ್ರ ಬಿತ್ತರಿಸಿದೆ. 599 ರೂಪಾಯಿ ಮತ್ತು 699 ರೂಪಾಯಿ ಯೋಜನೆಳು ಮಾತ್ರ ಲಭ್ಯವಿದೆ. ಏರ್ಟೆಲ್ ತನ್ನ ಎಲ್ಲಾ ಪ್ರಿಪೇಯ್ಡ್ ಯೋಜನೆಗಳೊಂದಿಗೆ 155 ರೂಪಾಯಿಯಿಂದ ಪ್ರಾರಂಭವಾಗುವ ತನ್ನ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ ಪ್ರಯೋಜನಗಳನ್ನು ನೀಡುತ್ತದೆ.
‘ಒಮಿಕ್ರಾನ್’ ಪತ್ತೆ ಹಿನ್ನೆಲೆಯಲ್ಲಿ ಮತ್ತೆ ಜಾರಿಯಾಗುತ್ತಾ ಸ್ಟ್ರಿಕ್ಟ್ ರೂಲ್ಸ್….?
ಈ ಎರಡೂ ಯೋಜನೆಗಳು ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್ಎಂಎಸ್ ಜೊತೆಗೆ 3ಜಿಬಿ ದೈನಂದಿನ ಡೇಟಾವನ್ನು ನೀಡುತ್ತವೆ. 599 ರೂಪಾಯಿ ಪ್ರಿಪೇಯ್ಡ್ ಯೋಜನೆಯಲ್ಲಿ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಚಂದಾದಾರಿಕೆ ಜೊತೆ 28 ದಿನಗಳ ಮಾನ್ಯತೆ ಸಿಗಲಿದೆ. ಇನ್ನು 699 ರೂಪಾಯಿ ಪ್ರಿಪೇಯ್ಡ್ ಯೋಜನೆಯಲ್ಲಿ ಅಮೆಜಾನ್ ಪ್ರೈಮ್ ಸದಸ್ಯತ್ವದ ಸೌಲಭ್ಯ ಸಿಗಲಿದೆ. ಇದು 56 ದಿನಗಳ ಮಾನ್ಯತೆ ಹೊಂದಿದೆ.