ಒಂದಾದ ಮೇಲೆ ಒಂದರ ಬೆಲೆ ಏರಿಕೆಯಿಂದ ಶಾಕ್ ನಲ್ಲಿದ್ದ ಜನರಿಗೆ ಟೆಲಿಕಾಂ ಕಂಪನಿಗಳು ಬೆಲೆ ಏರಿಕೆ ಮಾಡಿ ನಿರಾಸೆ ಮೂಡಿಸಿವೆ. ವಿಐ, ಏರ್ಟೆಲ್ ಸೇರಿದಂತೆ ಜಿಯೋ ಕೂಡ ಕೆಲ ಯೋಜನೆಗಳ ಬೆಲೆ ಏರಿಕೆ ಮಾಡಿದೆ. ಏರ್ಟೆಲ್ ನ ಕೆಲ ಯೋಜನೆಗಳ ಬೆಲೆ ನವಂಬರ್ 26ರಿಂದ ಏರಿಕೆ ಕಂಡಿದ್ದು, ಗ್ರಾಹಕರ ಕೋಪಕ್ಕೆ ಕಾರಣವಾಗಿತ್ತು. ಗ್ರಾಹಕರನ್ನು ಸಮಾಧಾನಗೊಳಿಸಲು ಕಂಪನಿ ಈಗ ಕೆಲ ಆಫರ್ ನೀಡಲು ಮುಂದಾಗಿದೆ.
ಕಂಪನಿ ತನ್ನ ಕೆಲವು ರೀಚಾರ್ಜ್‌ಗಳೊಂದಿಗೆ ಬಳಕೆದಾರರಿಗೆ 4ಜಿಬಿ ಡೇಟಾವನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿದೆ. ಕಂಪನಿ 699 ರೂಪಾಯಿ, 549 ರೂಪಾಯಿ ಮತ್ತು 479 ರೂಪಾಯಿ ಯೋಜನೆಗೆ ಈ ಆಫರ್ ನೀಡ್ತಿದೆ. ಇದಲ್ಲದೆ ಕಂಪನಿಯು 350 ರೂಪಾಯಿಗಳ ರೀಚಾರ್ಜ್ ಯೋಜನೆಯೊಂದಿಗೆ 2ಜಿಬಿ ಉಚಿತ ಡೇಟಾದ ಕೂಪನ್ ನೀಡುತ್ತಿದೆ.
ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಆಫರ್ ನಿಮಗೆ ಸಿಗುವುದಿಲ್ಲ. ಏರ್ಟೆಲ್ ಅಪ್ಲಿಕೇಶನ್ ಬಳಕೆದಾರರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಅಪ್ಲಿಕೇಷನ್ ಬಳಕೆದಾರರಿಗೆ ಕೂಪನ್‌ಗಳ ಲಾಭ ಸಿಗಲಿದೆ. ಅಪ್ಲಿಕೇಶನ್ ಓಪನ್ ಮಾಡಿ, ರೀಚಾರ್ಜ್ ವಿಭಾಗಕ್ಕೆ ಹೋಗಬೇಕು. ಎಲ್ಲಾ ಪ್ಯಾಕ್‌ಗಳನ್ನು ಟ್ಯಾಪ್ ಮಾಡಬೇಕು. ಅದರ ನಂತರ ಕೆಲವು ಪ್ರಿಪೇಯ್ಡ್ ಯೋಜನೆಗಳೊಂದಿಗೆ ಉಚಿತ ಡೇಟಾ ಕೂಪನ್ ಸಿಗಲಿದೆ.
ಏರ್ಟೆಲ್‌ನ 479 ರೂಪಾಯಿ ಪ್ಲಾನ್ ನಲ್ಲಿ ಬಳಕೆದಾರರಿಗೆ 4ಜಿಬಿ ಉಚಿತ ಡೇಟಾ ಕೂಪನ್ ಸಿಗಲಿದೆ. ಈ ಯೋಜನೆಯು 56 ದಿನಗಳ ಮಾನ್ಯತೆ ಹೊಂದಿದೆ. ಪ್ರತಿದಿನ 100 ಎಸ್ ಎಂ ಎಸ್ ಉಚಿತವಾಗಿ ಸಿಗಲಿದೆ. ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ.
ಏರ್ಟೆಲ್‌ನ 549 ರೂಪಾಯಿ ಯೋಜನೆಯಲ್ಲಿ ಬಳಕೆದಾರರಿಗೆ ಉಚಿತ 4ಜಿಬಿ ಡೇಟಾ ಕೂಪನ್ ಸಿಗಲಿದೆ. ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಕರೆ ಸೌಲಭ್ಯ ಮತ್ತು ಪ್ರತಿದಿನ 2ಜಿಬಿ ಡೇಟಾ ಸಿಗಲಿದೆ.