ವರ್ಕ್ ಫ್ರಂ ಹೋಮ್ ಗಮನದಲ್ಲಿಟ್ಟುಕೊಂಡು ಭಾರತದ ಎಲ್ಲ ಟೆಲಿಕಾಂ ಕಂಪನಿಗಳು ಅಗ್ಗದ ಆಫರ್ ನೀಡ್ತಿವೆ. ಕರೆಗಿಂತ ಹೆಚ್ಚು ಡೇಟಾ ಆಫರ್ ಮಾಡ್ತಿವೆ. ಇದ್ರಲ್ಲಿ ಏರ್ಟೆಲ್ ಹಿಂದೆ ಬಿದ್ದಿಲ್ಲ. ಕಂಪನಿ ಈಗ 249 ರೂಪಾಯಿ ರೀಚಾರ್ಜ್ ಯೋಜನೆಯೊಂದಿಗೆ 500ಎಂಬಿ ಉಚಿತ ಡೇಟಾ ನೀಡ್ತಿದೆ. ಇದು ನಿರ್ದಿಷ್ಟ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗೆ ಮಾತ್ರ ಲಭ್ಯವಿದೆ.
ಸಿನಿಪ್ರಿಯರಿಗೆ ಬಂಪರ್ ಆಫರ್..! ಈ ಬ್ಯಾಂಕ್ ನೀಡ್ತಿದೆ ಕಡಿಮೆ ದರದಲ್ಲಿ ಸಿನಿಮಾ ನೋಡುವ ಅವಕಾಶ
ಏರ್ಟೆಲ್ ನ 249 ರೂಪಾಯಿ ಯೋಜನೆ ಹೊಸದಲ್ಲ. ಹಳೆ ಯೋಜನೆಯಲ್ಲಿ ಕಂಪನಿ 1.5 ಜಿಬಿ ಡೇಟಾವನ್ನು ನೀಡ್ತಾಯಿತ್ತು. ಈಗ ಇದನ್ನು 500 ಎಂಬಿ ಹೆಚ್ಚಿಸಿದೆ. ಅಂದ್ರೆ 249 ರೂಪಾಯಿ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿ ದಿನ 1.5 ಜಿಬಿ ಡೇಟಾ ಬದಲು 2ಜಿಬಿ ಡೇಟಾ ಲಭ್ಯವಿದೆ. ಇದಲ್ಲದೆ ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಏರ್ಟೆಲ್ ಥ್ಯಾಂಕ್ಸ್ ಜೊತೆ ಅನಿಯಮಿತ ಧ್ವನಿ ಕರೆ, ದಿನಕ್ಕೆ 100 ಎಸ್ಎಂಎಸ್ ಲಭ್ಯವಿದೆ.
ಏರ್ಟೆಲ್‌ನ 249 ರೂಪಾಯಿ ಯೋಜನೆ 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಅಂದ್ರೆ 28 ದಿನಗಳ ಕಾಲ ಒಟ್ಟೂ 42ಜಿಬಿ ಡೇಟಾ ಗ್ರಾಹಕರಿಗೆ ಸಿಗಲಿದೆ. ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ನ ಮೂಲಕ ಈ ಹೆಚ್ಚುವರಿ ಏರ್ಟೆಲ್ ಸೌಲಭ್ಯ ಪಡೆಯಬಹುದು.