ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಅನೇಕ ಯೋಜನೆಗಳ ಬೆಲೆಯನ್ನು ಅಗ್ಗಗೊಳಿಸಿವೆ. ಆದ್ರೆ ಏರ್ಟೆಲ್ ಗ್ರಾಹಕರಿಗೆ ಶಾಕ್ ನೀಡಿದೆ. ಕಂಪನಿ ಕೆಲ ಪ್ಲಾನ್ ಬೆಲೆಯನ್ನು ದುಬಾರಿಗೊಳಿಸಿದೆ.
ಏರ್ಟೆಲ್ನ ಅಗ್ಗದ ಮಾಸಿಕ ಯೋಜನೆಯ ಬೆಲೆ 49 ರೂಪಾಯಿಗಳಿಂದ ಪ್ರಾರಂಭವಾಗುತ್ತಿತ್ತು. ಈಗ ಇದರ ಬೆಲೆಯನ್ನು ಕಂಪನಿ 79 ರೂಪಾಯಿಗೆ ಏರಿಸಿದೆ. ಜುಲೈ 29ರಿಂದ ಹೊಸ ದರಗಳು ಅನ್ವಯವಾಗಲಿವೆ. ಏರ್ಟೆಲ್ 49 ರೂಪಾಯಿಗಳ ಯೋಜನೆಯನ್ನು ರದ್ದು ಗೊಳಿಸಿದೆ. ಏರ್ಟೆಲ್ ಅಗ್ಗದ ಮಾಸಿಕ ಯೋಜನೆ ಬೆಲೆ 79 ರೂಪಾಯಿಗಳಿಂದ ಶುರುವಾಗಲಿದೆ.
79 ರೂಪಾಯಿಗಳ ಪ್ರಿಪೇಯ್ಡ್ ಯೋಜನೆಯಲ್ಲಿ 64 ರೂಪಾಯಿಗಳ ಟಾಕ್ ಟೈಮ್ ಲಭ್ಯವಿದೆ. ಈ ಯೋಜನೆಯ ಸಿಂಧುತ್ವವು 28 ದಿನಗಳು. ಬಳಕೆದಾರರಿಗೆ 200 ಎಂಬಿ ಡೇಟಾ ಸಿಗಲಿದೆ. 49 ರೂಪಾಯಿಗಳ ಯೋಜನೆಯಲ್ಲಿ ಬಳಕೆದಾರರಿಗೆ 38 ರೂಪಾಯಿಗಳ ಟಾಕ್ ಟೈಮ್ ಸಿಗ್ತಿತ್ತು. 100 ಎಂಬಿ ಡೇಟಾ ಸಿಗ್ತಿತ್ತು. 28 ದಿನಗಳ ಸಿಂಧುತ್ವವನ್ನು ಇದು ಹೊಂದಿತ್ತು.
ಈಗಾಗಲೇ ಏರ್ಟೆಲ್ 199 ರೂಪಾಯಿ ಮತ್ತು 249 ರೂಪಾಯಿ ಪ್ಲಾನ್ ರದ್ದುಗೊಳಿಸಿದೆ.