ಏರ್ಟೆಲ್ ಸಿಮ್ ಗ್ರಾಹಕರಿಗೆ ಖುಷಿ ಸುದ್ದಿಯೊಂದಿದೆ. ಕಂಪನಿ 4 ಲಕ್ಷ ರೂಪಾಯಿಗಳ ನೇರ ಪ್ರಯೋಜನವನ್ನು ನೀಡುತ್ತಿದೆ. ಇದಕ್ಕಾಗಿ ಕೇವಲ 279 ಖರ್ಚು ಮಾಡಬೇಕಾಗುತ್ತದೆ. ಏರ್ಟೆಲ್, 279 ರೂಪಾಯಿಗಳ ರೀಚಾರ್ಜ್ ಯೋಜನೆಯಲ್ಲಿ ಉಚಿತ ಟರ್ಮ್ ಲೈಫ್ ಇನ್ಶೂರೆನ್ಸ್ ನೀಡುತ್ತಿದೆ.
ಏರ್ಟೆಲ್ ತನ್ನ ಗ್ರಾಹಕರಿಗೆ ಎರಡು ಪ್ರಿಪೇಯ್ಡ್ ರೀಚಾರ್ಜ್‌ಗಳೊಂದಿಗೆ ಉಚಿತ ಜೀವ ವಿಮೆಯನ್ನು ನೀಡುತ್ತದೆ. 279 ರೂಪಾಯಿ ರೀಚಾರ್ಜ್ ಯೋಜನೆಯಲ್ಲಿ 4 ಲಕ್ಷ ರೂಪಾಯಿಗಳ ಟರ್ಮ್ ಲೈಫ್ ಇನ್ಶೂರೆನ್ಸ್ ಸೇರಿದತೆ ಇತರ ಹಲವು ಪ್ರಯೋಜನಗಳಿವೆ. 179 ರೂಪಾಯಿ ಪ್ರಿಪೇಯ್ಡ್ ರೀಚಾರ್ಜ್ ಮೇಲೆ 2 ಲಕ್ಷಗಳ ಜೀವ ವಿಮೆ ಲಭ್ಯವಿದೆ.
ಏರ್ಟೆಲ್ ಮಾತ್ರವಲ್ಲ ಇನ್ನೂ ಅನೇಕ ಕಂಪನಿಗಳು ವಿಮೆ ಲಾಭವನ್ನು ನೀಡುತ್ತವೆ. ಇಪಿಎಫ್‌ಒ ಖಾತೆದಾರರು ಉದ್ಯೋಗಿ ಠೇವಣಿ ಲಿಂಕ್ಡ್ ವಿಮಾ ಯೋಜನೆ ಅಡಿಯಲ್ಲಿ ವಿಮಾ ರಕ್ಷಣೆಯ ಸೌಲಭ್ಯವನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ, ಇಪಿಎಫ್‌ಒ ಮೂಲಕ ನಾಮಿನಿಗೆ ಗರಿಷ್ಠ 7 ಲಕ್ಷ ರೂಪಾಯಿಗಳ ವಿಮಾ ರಕ್ಷಣೆ ಸಿಗಲಿದೆ.
ಎಲ್ಪಿಜಿ ಸಂಪರ್ಕ ಹೊಂದಿರುವ ಗ್ರಾಹಕರಿಗೆ ವೈಯಕ್ತಿಕ ಅಪಘಾತ ಕವರ್ ಕೂಡ ನೀಡಲಾಗುತ್ತದೆ. ಇದರ ಅಡಿಯಲ್ಲಿ, ಅನಿಲದ ಸೋರಿಕೆ ಅಥವಾ ಎಲ್‌ಪಿಜಿ ಸಿಲಿಂಡರ್ ಸ್ಫೋಟದಿಂದಾಗಿ ಅಹಿತಕರ ಅಪಘಾತ ಸಂಭವಿಸಿದಲ್ಲಿ 50 ಲಕ್ಷದವರೆಗೆ ವಿಮಾ ಹಣ ನೀಡಲಾಗುವುದು.