alex Certify ಈ ಯೋಜನೆಯಲ್ಲಿ 5 ರೂ.ಗೆ ಸಿಗ್ತಿದೆ 1 ಜಿಬಿ ಡೇಟಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಯೋಜನೆಯಲ್ಲಿ 5 ರೂ.ಗೆ ಸಿಗ್ತಿದೆ 1 ಜಿಬಿ ಡೇಟಾ

ಗ್ರಾಹಕರನ್ನು ಸೆಳೆಯಲು ಅನೇಕ ಟೆಲಿಕಾಂ ಕಂಪನಿಗಳು, ಅಗ್ಗದ ಪ್ಲಾನ್ ಬಿಡುಗಡೆ ಮಾಡ್ತಿವೆ. ಈಗ ಏರ್ಟೆಲ್ ಕೂಡ ಅಗ್ಗದ ಪ್ಲಾನ್ ಒಂದನ್ನು ಗ್ರಾಹಕರಿಗೆ ನೀಡ್ತಿದೆ. ಏರ್ಟೆಲ್ ಈ ಯೋಜನೆಯಲ್ಲಿ ಗ್ರಾಹಕರು, ದಿನಕ್ಕೆ 5 ರೂಪಾಯಿ ಖರ್ಚು ಮಾಡಿ 1 ಜಿಬಿ ಡೇಟಾ ಹಾಗೂ ಇತರ ಸೌಲಭ್ಯವನ್ನು  ಪಡೆಯಬಹುದಾಗಿದೆ.

ಏರ್ಟೆಲ್ ಕಂಪನಿಯ ಈ ಹೊಸ ಯೋಜನೆ ಬೆಲೆ 448 ರೂಪಾಯಿ. 28 ದಿನಗಳ ಸಿಂಧುತ್ವದ ಈ ಯೋಜನೆಯಲ್ಲಿ 3.3 ಜಿಬಿ ಡೇಟಾವನ್ನು ಪ್ರತಿದಿನ ನೀಡಲಾಗುತ್ತಿದೆ. 28 ​​ದಿನಗಳಲ್ಲಿ ಗ್ರಾಹಕರಿಗೆ 84ಜಿಬಿ ಡೇಟಾ ಸಿಗಲಿದೆ.

ಈ ಯೋಜನೆಯಲ್ಲಿ ಕಂಪನಿಯು ತನ್ನ ಗ್ರಾಹಕರಿಗೆ 100 ಉಚಿತ ಎಸ್ ಎಂಎಸ್ ಸೌಲಭ್ಯ ನೀಡ್ತಿದೆ. ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯ ಸಿಗ್ತಿದೆ. ಕಂಪನಿಯ ಈ ಯೋಜನೆಯಲ್ಲಿ ಒಂದು ವರ್ಷದವರೆಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆ ಸಿಗಲಿದೆ. ಇದ್ರ ಚಂದಾದಾರಿಕೆ ಬೆಲೆ 399 ರೂಪಾಯಿಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...