ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧೆಯಿದೆ. ಗ್ರಾಹಕರನ್ನು ಸೆಳೆಯಲು ಎಲ್ಲ ಟೆಲಿಕಾಂ ಕಂಪನಿಗಳು ಬೆಲೆ ಯುದ್ಧ ನಡೆಸುತ್ತಿವೆ. ಈ ಕಂಪನಿಗಳು ಗ್ರಾಹಕರಿಗೆ ಆಕರ್ಷಕ ಯೋಜನೆಗಳನ್ನು ನೀಡುತ್ತಿವೆ.
ಏರ್ಟೆಲ್ ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದು. ಇತ್ತೀಚೆಗೆ ಏರ್ಟೆಲ್ ಹೊಸ ಹೆಜ್ಜೆಯಿಟ್ಟಿದೆ.
ಏರ್ಟೆಲ್ ಮೊಬೈಲ್ ನೆಟ್‌ವರ್ಕ್‌ಗಳು ಮತ್ತು ಫೈಬರ್ ಸಂಪರ್ಕಗಳಿಂದ ಹಿಡಿದು ಡಿಟಿಎಚ್ ಸೇವೆಗಳವರೆಗೆ ಎಲ್ಲವನ್ನೂ ಒದಗಿಸುವ ಕಂಪನಿಯಾಗಿದೆ. ಏರ್ಟೆಲ್, ಏರ್ಟೆಲ್ ಬ್ಲ್ಯಾಕ್ ಸೇವೆಯನ್ನು ಶುರು ಮಾಡಿದೆ. ಟೆಲಿಕಾಂ ಕಂಪನಿಗಳಲ್ಲಿ ಇದು ವಿಶೇಷ ಸೇವೆಯಾಗಿದೆ. ಇದ್ರಲ್ಲಿ ಗ್ರಾಹಕರು ಏರ್ಟೆಲ್‌ನ ವಿವಿಧ ಸೇವೆಗಳಿಗೆ ಪ್ರತ್ಯೇಕವಾಗಿ ಹಣ ಪಾವತಿಸಬೇಕಾಗಿಲ್ಲ.
ಸಾಮಾನ್ಯವಾಗಿ ಏರ್ಟೆಲ್ ನ ಅನೇಕ ಸೇವೆಗಳನ್ನು ಗ್ರಾಹಕರು ಪಡೆಯುತ್ತಾರೆ. ಆದ್ರೆ ಎಲ್ಲ ಸೇವೆಗಳಿಗೆ ಬೇರೆ ಬೇರೆ ಕೊನೆ ದಿನಾಂಕವಿರುತ್ತದೆ. ಎಲ್ಲವನ್ನೂ ನೆನಪಿಟ್ಟುಕೊಂಡು ಪಾವತಿ ಮಾಡುವುದು ಕಷ್ಟವಾಗುತ್ತದೆ. ಆದ್ರೆ ಇನ್ಮುಂದೆ ಎಲ್ಲವನ್ನೂ ನೆನಪಿಟ್ಟುಕೊಳ್ಳಬೇಕಾಗಿಲ್ಲ. ಎಲ್ಲ ಸೇವೆಯ ಹಣವನ್ನು ಒಂದೇ ಬಾರಿ, ಒಂದೇ ದಿನ ಪಾವತಿ ಮಾಡಬಹುದು. ಏರ್ಟೆಲ್ ಬ್ಲ್ಯಾಕ್ ಸೌಲಭ್ಯದ ಮೂಲಕ ಇದ್ರ ಲಾಭ ಪಡೆಯಬಹುದು.
ಏರ್ಟೆಲ್ ಬ್ಲ್ಯಾಕ್ ಸೇವೆ ಪಡೆದ ನಂತ್ರ ಏರ್ಟೆಲ್ ಇನ್ನೊಂದು ಸೇವೆ ಪಡೆಯಲು ಗ್ರಾಹಕರು ಬಯಸಿದ್ರೆ ಆ ಹೊಸ ಸೇವೆ ಗ್ರಾಹಕರಿಗೆ 30 ದಿನ ಉಚಿತವಾಗಿರಲಿದೆ. ಏರ್ಟೆಲ್ ಬ್ಲ್ಯಾಕ್ ಪ್ಲಾನ್‌ಗಳು 998 ರೂಪಾಯಿಯಿಂದ ಆರಂಭವಾಗಿ 2,099 ರೂಪಾಯಿವರೆಗೆ ಇರಲಿದೆ.