alex Certify ಉಚಿತ ಟಿವಿ, ನೆಟ್‌ಫ್ಲಿಕ್ಸ್ ಜತೆಗೆ ಹೊಸ ಎಕ್ಸ್‌ಸ್ಟ್ರೀಮ್ ಫೈಬರ್ ಬ್ರಾಡ್‌ಬ್ಯಾಂಡ್ ಪ್ಲಾನ್ ಪ್ರಕಟಿಸಿದ ಏರ್ಟೆಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಚಿತ ಟಿವಿ, ನೆಟ್‌ಫ್ಲಿಕ್ಸ್ ಜತೆಗೆ ಹೊಸ ಎಕ್ಸ್‌ಸ್ಟ್ರೀಮ್ ಫೈಬರ್ ಬ್ರಾಡ್‌ಬ್ಯಾಂಡ್ ಪ್ಲಾನ್ ಪ್ರಕಟಿಸಿದ ಏರ್ಟೆಲ್

ಮುಂಬೈ: ಏರ್ಟೆಲ್‌, ಗ್ರಾಹಕರನ್ನು ಸೆಳೆಯಲು ಹೊಸ ಎಕ್ಸ್‌ಸ್ಟ್ರೀಮ್ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಇದು ಹೆಚ್ಚುವರಿ ಪ್ರಯೋಜನಗಳನ್ನು ಹೊಂದಿದ್ದು, ಅದಕ್ಕಾಗಿ ಹೆಚ್ಚುವರಿ ಪಾವತಿ ಮಾಡಬೇಕಾಗುತ್ತದೆ ಎಂದು ಭಾರ್ತಿ ಏರ್ಟೆಲ್‌ ತಿಳಿಸಿದೆ.

ಮೂರು ಹೊಸ ಬ್ರಾಡ್‌ಬ್ಯಾಂಡ್ ಯೋಜನೆಗಳು 1599 ರೂಪಾಯಿ, 699 ರೂಪಾಯಿ, ಮತ್ತು 1,099 ರೂಪಾಯಿ ಪ್ಲ್ಯಾನ್‌ಗಳಲ್ಲಿ ಲಭ್ಯ ಇವೆ. ಇವೆಲ್ಲವೂ ಏರ್‌ಟೆಲ್‌ 4K ಎಕ್ಸ್‌ಸ್ಟ್ರೀಮ್ ಬಾಕ್ಸ್‌ ಮತ್ತು 350 ಕ್ಕೂ ಹೆಚ್ಚು ಫ್ರೀ ಚಾನಲ್‌ಗಳ ಆಫರ್‌ನೊಂದಿಗೆ ಸೇರಿಕೊಂಡಿವೆ.

ಏರ್ಟೆಲ್ ರೂ. 1,599 ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌

ಇದು 1,498 ರೂಪಾಯಿ ಪ್ಲಾನ್‌ಗೆ ಹೋಲುತ್ತದೆ. ಆದರೆ, ಹೊಸದರೊಂದಿಗೆ, ಗ್ರಾಹಕರು ಏರ್‌ಟೆಲ್ 4K ಎಕ್ಸ್‌ಸ್ಟ್ರೀಮ್ ಬಾಕ್ಸ್‌ನೊಂದಿಗೆ 350 ಕ್ಕೂ ಹೆಚ್ಚು ಚಾನಲ್‌ ಉಚಿತವಾಗಿ ವೀಕ್ಷಿಸಬಹುದು.

ಈ ಬಾಕ್ಸ್‌ಗಾಗಿ 2,000 ರೂಪಾಯಿ ಒಮ್ಮೆ ಪಾವತಿಸಬೇಕಾಗುತ್ತದೆ. ಬಳಕೆದಾರರು ಕೇಬಲ್ ಟಿವಿ ಮತ್ತು OTT ಆನಂದಿಸಲು ಸಾಧ್ಯವಾಗುತ್ತದೆ. ಇದರ ಹೊರತಾಗಿ, ಬಳಕೆದಾರರು 300Mbps ವೇಗದ ಇಂಟರ್‌ನೆಟ್‌ ಪಡೆಯುತ್ತಾರೆ. Netflix, Amazon Prime ಮತ್ತು Disney+ Hotstar ಉಚಿತವಾಗಿರುತ್ತವೆ. SonyLIV, ErosNow, Lionsgate Play, Hoichoi, ManoramaMax, Shemaroo, Ultra, HungamaPlay, EPICon, DivoTV, Klikk, Nammaflix, Dollywood ಮತ್ತು Shorts TV ಸೇರಿ 14 ಒಟಿಟಿಗಳಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಸಿಂಗಲ್ ಲಾಗಿನ್ ಆಗಿರಲಿದೆ.

3.3 ಟಿಬಿ ಡೇಟಾ ಬಳಕೆಗೆ ಅವಕಾಶವಿದೆ.

ಏರ್‌ಟೆಲ್ ರೂ. 1099 ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌‌ 3.3 ಟಿಬಿ ಮಾಸಿಕ FUP ಡೇಟಾದೊಂದಿಗೆ 200Mbps ವೇಗದ ಇಂಟರ್‌ನೆಟ್‌ ಒದಗಿಸುವ 1099 ರೂಪಾಯಿಯ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ ಇದು. ಇಲ್ಲಿ ಒಟಿಟಿ ಪ್ರಯೋಜನಗಳು ರೂ. 1599 ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಹೋಲುತ್ತವೆ.

ಒಂದೇ ವ್ಯತ್ಯಾಸವೆಂದರೆ ನೆಟ್‌ಫ್ಲಿಕ್ಸ್ ಇರುವುದಿಲ್ಲ.

ಏರ್ಟೆಲ್ ರೂ.699 ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌

40Mbps ವೇಗದ ಇಂಟರ್‌ನೆಟ್‌ ನೀಡುತ್ತದೆ. ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವೀಡಿಯೋ ಹೊರತುಪಡಿಸಿ, ಮೇಲೆ ತಿಳಿಸಿದ ಎಲ್ಲಾ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಿದೆ.

ಗ್ರಾಹಕರು 3.3TB ಮಾಸಿಕ ಡೇಟಾವನ್ನು ಪಡೆಯುತ್ತಾರೆ ಮತ್ತು ಟಿವಿ ಆಫರ್ ಕೂಡ ಇಲ್ಲಿ ಅನ್ವಯಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...