ಗ್ರಾಹಕರಿಗೆ ಉತ್ತಮ ಲಾಭ ನೀಡಲು ಟೆಲಿಕಾಂ ಕಂಪನಿಗಳು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರ್ತಿವೆ. ದೀರ್ಘಕಾಲದಿಂದ ಟೆಲಿಕಾಂ ಕಂಪನಿಗಳ ಮಧ್ಯೆ ಕಠಿಣ ಸ್ಪರ್ಧೆಯಿದೆ. ಜಿಯೋಗೆ ಟಕ್ಕರ್ ನೀಡಲು ಏರ್ಟೆಲ್ ಮುಂದಾಗಿದೆ. ಪ್ರಿಪೇಯ್ಡ್ ಬಳಕೆದಾರರಿಗೆ ಏರ್ಟೆಲ್ ಹೊಸ ಯೋಜನೆ ಬಿಡುಗಡೆ ಮಾಡಿದೆ. ಇದ್ರಲ್ಲಿ ದೈನಂದಿನ ಡೇಟಾ ಮಿತಿಯಿಲ್ಲ.
ಜಿಯೋ ಇತ್ತೀಚೆಗೆ 447 ರೂಪಾಯಿಗಳ ಡೇಟಾ-ಮಿತಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ದೈನಂದಿನ ಮಿತಿಯಿಲ್ಲದೆ ಡೇಟಾವನ್ನು ನೀಡಲಾಗುತ್ತಿದೆ. ಇದಕ್ಕೆ ಟಕ್ಕರ್ ನೀಡಲು ಏರ್ಟೆಲ್ ಈಗ 456 ರೂಪಾಯಿಗಳ ದೈನಂದಿನ ಡೇಟಾ ಮಿತಿ ಯೋಜನೆಯನ್ನು ಬಿಡುಗಡೆ ಮಾಡಿದೆ.
ಇದ್ರಲ್ಲಿ ಗ್ರಾಹಕರು ಯಾವುದೇ ದೈನಂದಿನ ಮಿತಿಯಿಲ್ಲದೆ 50 ಜಿಬಿ ಡೇಟಾವನ್ನು ಪಡೆಯುತ್ತಾರೆ. ಬಳಕೆದಾರ ಸಂಪೂರ್ಣ ಡೇಟಾವನ್ನು ಒಂದೇ ಬಾರಿ ಬೇಕಾದರೂ ಬಳಸಬಹುದು. 60 ದಿನಗಳ ಮಾನ್ಯತೆ ಹೊಂದಿರುವ ಈ ಯೋಜನೆಯಲ್ಲಿ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಸೌಲಭ್ಯ ನೀಡಲಾಗಿದೆ. ದಿನಕ್ಕೆ 100 ಎಸ್‌ಎಂಎಸ್ ಸಿಗ್ತಿದೆ. ಉಚಿತ ಹೆಲೋಟ್ಯೂನ್, ಅಮೆಜಾನ್ ಪ್ರೈಮ್ ವಿಡಿಯೋ, ಏರ್ಟೆಲ್ ಎಕ್ಸ್ ಸ್ಟ್ರೀಮ್ ಪ್ರೀಮಿಯಂ, ವಿಂಕ್ ಮ್ಯೂಸಿಕ್, ಶಾ ಅಕಾಡೆಮಿಯ ಉಚಿತ ಆನ್‌ಲೈನ್ ಕೋರ್ಸ್ ಸೇರಿದಂತೆ ಅನೇಕ ಸೌಲಭ್ಯ ಲಭ್ಯವಿದೆ.