
ಬೆಂಗಳೂರು: ಏರ್ಪೋರ್ಟ್ ಸಿಬ್ಬಂದಿ ಫ್ರಂಟ್ಲೈನ್ ವಾರಿಯರ್ಸ್ ಅಲ್ಲವಾದ್ದರಿಂದ ಏರ್ಪೋರ್ಟ್ ಸಿಬ್ಬಂದಿಗೆ ಕೊರೋನಾ ಲಸಿಕೆ ನೀಡಿಕೆ ಆದೇಶ ವಾಪಸ್ ಪಡೆಯಲಾಗಿದೆ.
ಏರ್ಪೋರ್ಟ್ ಸಿಬ್ಬಂದಿಗೆ ಲಸಿಕೆ ನೀಡುವ ಕುರಿತ ಆದೇಶವನ್ನು ಆರೋಗ್ಯ ಇಲಾಖೆ ಹಿಂಪಡೆದುಕೊಂಡಿದೆ. ಏರ್ಪೋರ್ಟ್ ಸಿಬ್ಬಂದಿಗಳು ಫ್ರಂಟ್ ಲೈನ್ ಕೊರೋನಾ ವಾರಿಯರ್ಸ್ ಗಳೆಂದು ಪರಿಗಣಿಸಿ ಅವರಿಗೆ ಲಸಿಕೆ ನೀಡುವುದಾಗಿ ಆರೋಗ್ಯ ಇಲಾಖೆ ಜನವರಿ 22ರಂದು ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂದು ಹೇಳಲಾಗಿದೆ.