
ಕಳೆದ ಭಾನುವಾರ ಆಸ್ಟ್ರೇಲಿಯಾದಲ್ಲಿ ನಡೆದ ಟಿ-20 ಪಂದ್ಯದಲ್ಲಿ ಭಾರತದ ವಿರುದ್ಧದ ಪ್ರಮುಖ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 5 ವಿಕೆಟ್‌ಗಳ ಜಯ ಸಾಧಿಸಿತು. ಐಡೆನ್ ಮಾಕ್ರಮ್ ಮತ್ತು ಡೇವಿಡ್ ಮಿಲ್ಲರ್ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತದ ವಿರುದ್ಧ ಅಮೋಘವಾಗಿ ಗೆದ್ದಿತು.
ಕಳೆದ ಎರಡು ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ್ದ ವಿರಾಟ್ ಕೊಹ್ಲಿ ಕೂಡ ದಕ್ಷಿಣ ಆಫ್ರಿಕಾ ವಿರುದ್ಧ ಮಿಂಚಲಿಲ್ಲ. ಅಕ್ಷರ್ ಪಟೇಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ದೀಪಕ್ ಹೂಡಾ ಕೂಡ ಶೂನ್ಯಕ್ಕೆ ಔಟಾದರು.
ಸೂರ್ಯಕುಮಾರ್ ಯಾದವ್ ಒಬ್ಬರೇ ಏಕಾಂಗಿಯಾಗಿ ಹೋರಾಡಿದರು. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಕೂಡ ರನ್ ಗಳಿಸದಿರುವುದು ತಂಡದ ಸ್ಕೋರ್ ಮೇಲೆ ಪರಿಣಾಮ ಬೀರಿತು.
ಅದೇನೆ ಇದ್ದರೂ ಟೀಮ್ ಇಂಡಿಯಾ ಅಭಿಮಾನಿಯೊಬ್ಬರ ವಿಷಯ ಮಾತ್ರ ಜಾಲತಾಣದಲ್ಲಿ ಭಾರಿ ಶ್ಲಾಘನೆಗೆ ಒಳಗಾಗಿದೆ. ಕ್ರಿಕೆಟ್ ವೀಕ್ಷಣೆಗೆಂದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕ್ರಿಕೆಟ್ ಅಭಿಮಾನಿ ವಿಕ್ರಮ್ ಗರ್ಗಾ ಅವರಿಗೆ ವಿಮಾನದ ಪೈಲೆಟ್ ಟಿಶ್ಯೂಪೇಪರ್ನಲ್ಲಿ ಬರೆದು ನೀಡಿದ ಸ್ಕೋರ್ ಇದಾಗಿದೆ. ಅದನ್ನು ಅವರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇಂಡಿಗೋ ಫ್ಲೈಟ್‌ನಲ್ಲಿ ಟಿಶ್ಯೂ ಪೇಪರ್‌ನಲ್ಲಿ ಸ್ಕೋರ್ ಅಪ್‌ಡೇಟ್ ಬರೆಯಲಾಗಿದ್ದು, ಅದನ್ನು ಪೈಲೆಟ್ ಅವರು ನೀಡಿದ್ದಾರೆ. ಟಿಪ್ಪಣಿಯಲ್ಲಿ, “SA 33/03, 6 ಓವರ್‌ಗಳು, IND 133/9” ಎಂದು ಬರೆಯಲಾಗಿದೆ. “ತಾತ್ಕಾಲಿಕ ಸ್ಕೋರ್‌ಕಾರ್ಡ್” ನ ಚಿತ್ರವನ್ನು ವಿಕ್ರಮ್ ಗರ್ಗಾ ಅವರು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ, “ಭಾರತ ಇಂದು ಸೋತಿದೆ ಆದರೆ @IndiGo6E ನನ್ನ ಹೃದಯವನ್ನು ಗೆದ್ದಿದೆ. ಸ್ಕೋರ್ ಅಪ್‌ಡೇಟ್‌ಗಾಗಿ ವಿನಂತಿಸಿದಾಗ ಪೈಲೆಟ್ ಇದನ್ನು ಬರೆದುಕೊಟ್ಟರು ಎಂದು ಅವರು ಹೇಳಿಕೊಂಡಿದ್ದಾರೆ.