ಜಗತ್ತಿನಾದ್ಯಂತ ಉತ್ಸಾಹಿ ಪ್ರವಾಸಿಗರು ಈ ಹಾಲಿಡೇ ಸೀಸನ್‌ನಲ್ಲಿ ಹೊಸ ಜಾಗಗಳಿಗೆ ಭೇಟಿ ನೀಡಲು ಕಾತರರಾಗಿದ್ದಾರೆ. ಕೋವಿಡ್ ಪ್ರಕರಣಗಳು ಎಲ್ಲೆಡೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಎಲ್ಲೆಡೆ ಗರಿಗೆದರುತ್ತಿವೆ.
ಹೊಸ ಸಾಹಸಗಳಿಗೆ ಕೈ ಹಾಕಲು ಇಚ್ಛಿಸುವ ಪ್ರವಾಸಿಗರನ್ನು ಸೆಳೆಯಲು ಕೆಲವೊಂದು ಟ್ರಾವೆಲ್ ಕಂಪನಿಗಳು ವಿಶಿಷ್ಟವಾದ ಹೆಜ್ಜೆಗಳನ್ನು ಇಡುತ್ತಿವೆ.
ಜಪಾನ್‌ನ ಬಜೆಟ್ ಏರ್‌ಲೈನ್ ಪೀಚ್ ಏವಿಯೇಷನ್ ಇಂಥದ್ದೊಂದು ಕೆಲಸಕ್ಕೆ ಕೈ ಹಾಕಿದೆ. ನಿಗೂಢ ಹಾಲಿಡೇಗಳಿಗೆ ಹೋಗಲು ಟಿಕಟ್‌ಗಳನ್ನು ವೆಂಡಿಂಗ್ ಯಂತ್ರಗಳ ಮೂಲಕ ವಿತರಿಸುತ್ತಿರುವ ಪೀಚ್ ಏವಿಯೇಷನ್, ದೇಶದ ಪ್ರವಾಸೋದ್ಯಮಕ್ಕೆ ಚುರುಕು ನೀಡಲು ನೋಡುತ್ತಿದೆ.
ಪತ್ನಿಯ ಬಿಕಿನಿ ಫೋಟೋ ಸೆರೆ ಹಿಡಿದ ಆಯುಷ್ಮಾನ್ ಖುರಾನಾ
ಟಿಕೆಟ್ ವೆಂಡಿಂಗ್ ಯಂತ್ರಗಳನ್ನು ಅನೇಕ ಜಾಗಗಳಲ್ಲಿ ಅಳವಡಿಸಲಾಗಿದೆ. ಈ ವೆಂಡಿಂಗ್ ಯಂತ್ರಗಳು ಸಾಮಾನ್ಯವಾಗಿ ಮಕ್ಕಳಿಗೆ ಆಟಿಕೆಗಳನ್ನು ವಿತರಿಸುತ್ತಿದ್ದವು. ಪೀಚ್ ಏವಿಯೇಷನ್ ಇದೀಗ ಈ ಯಂತ್ರಗಳನ್ನು ಟಿಕಟ್ ಮಾರಾಟ ಮಾಡಲು ಟೋಕಿಯೋದ ಹನೆಡಾ ವಿಮಾನ ನಿಲ್ದಾಣ ಅಥವಾ ಒಸಾಕಾದ ಕಾನ್ಸಾಯ್ ವಿಮಾನ ನಿಲ್ದಾಣದಿಂದ ಅನೇಕ ನಿಗೂಢ ತಾಣಗಳಿಗೆ ಹಾಲಿಡೇ ಮಾಡಲು ಹೋಗಲು ಟಿಕೆಟ್‌ಗಳ ವಿತರಣೆ ನಡೆಯುತ್ತಿದೆ.
ಜಪಾನ್‌ನ ಸಪ್ಪೋರೋ, ಸೆಂಡಾಯ್, ನಗೋಯಾ, ಫುಕುವೋಕಾ ಹಾಗೂ ನಹಾಗಳಿಗೆ ಈ ಟಿಕೆಟ್ ಗಳನ್ನು ಖರೀದಿಸಿ ತೆರಳಬಹುದಾಗಿದೆ.
ಗಚಪಾಂವ್ ಟಿಕೆಟ್ ಎನ್ನಲಾಗುವ ಈ ಟಿಕೆಟ್‌ಗಳು ಕೆಲವೇ ದಿನಗಳಲ್ಲಿ ಭಾರೀ ಜನಪ್ರಿಯತೆ ಪಡೆದಿವೆ. ಕಳೆದ ಎರಡು ತಿಂಗಳುಗಳಿಂದ ಪೀಚ್ ಏವಿಯೇಷನ್ ಅದಾಗಲೇ 3,000ಕ್ಕೂ ಹೆಚ್ಚು ಟಿಕೆಟ್‌ಗಳ ಮಾರಾಟ ಮಾಡಿದೆ.
ತಲಾ 5,000ಯೆನ್ (3,285ರೂ) ಬೆಲೆ ಬಾಳುವ ಟಿಕೆಟ್‌ಗಳು ಆಕರ್ಷಕ ರಿವಾರ್ಡ್‌ಗಳನ್ನೂ ಹೊಂದಿವೆ.