ನವದೆಹಲಿ: ಯುದ್ಧಪೀಡಿತ ಉಕ್ರೇನ್ ನಿಂದ ಭಾರತೀಯರನ್ನು ಏರ್ಲಿಫ್ಟ್ ಮಾಡಲು ಆಪರೇಷನ್ ಗಂಗಾ ಕಾರ್ಯಾಚರಣೆಗೆ ವೇಗ ನೀಡುವಂತೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ.
ವಾಯುಪಡೆಯ ಜಂಬೋ ವಿಮಾನವನ್ನು ಕೂಡ ಕಾರ್ಯಾಚರಣೆಗೆ ಬಳಕೆ ಮಾಡುತ್ತಿದ್ದು, ಉಕ್ರೇನ್ ನಲ್ಲಿ ಸಿಲುಕಿದ ಭಾರತೀಯರ ಕರೆತರಲು ಒಂದೇ ದಿನ 12 ವಿಮಾನಗಳು ಸಂಚರಿಸಲಿವೆ. ನಿನ್ನೆ ಬುಕಾರೆಸ್ಟ್ ಮತ್ತು ಬುಡಾಪೆಸ್ಟ್ ನಿಂದ 616 ಜನ ಭಾರತಕ್ಕೆ ಆಗಮಿಸಿದ್ದಾರೆ. ಮಂಗಳವಾರ ಹೊರಟ 8 ವಿಮಾನಗಳು ಇಂದು ತವರಿಗೆ ಆಗಮಿಸಲಿವೆ.