ನವದೆಹಲಿ: ಪೂರ್ವ ದೆಹಲಿಯಿಂದ ಗಗನಸಖಿ ಮನೆಗೆ ಕರೆದುಕೊಂಡು ಹೋಗುವಾಗ ಇ-ಬೈಕ್ ಟ್ಯಾಕ್ಸಿ ಸವಾರನೊಬ್ಬ ಎಳೆದುಕೊಂಡು ಹೋಗಿ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಬುದ್ಧ ಜಯಂತಿ ಪಾರ್ಕ್ ಬಳಿಯ ಸೈಮನ್ ಬೊಲಿವರ್ ಮಾರ್ಗದಲ್ಲಿ ಬುಧವಾರ ರಾತ್ರಿ ಪೂರ್ವ ದೆಹಲಿಯಲ್ಲಿ ಬಾಡಿಗೆಗೆ ಪಡೆದಿದ್ದ ಟ್ಯಾಕ್ಸಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ.
ಡೆಪ್ಯುಟಿ ಕಮಿಷನರ್ ಆಫ್ ಪೋಲೀಸ್(ನವದೆಹಲಿ) ದೇವೇಶ್ ಕುಮಾರ್ ಮಹ್ಲಾ ಅವರ ಪ್ರಕಾರ, ಆರೋಪಿಯನ್ನು ಜೈವೀರ್(35) ಎಂದು ಗುರುತಿಸಲಾಗಿದ್ದು, ಉತ್ತರ ಪ್ರದೇಶದ ಔರೈಯಾದಲ್ಲಿ ಆತನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಚಾಣಕ್ಯಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಈ ಹಿಂದೆಯೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಇದೆ.
ಬುಧವಾರ ರಾತ್ರಿ ದ್ವಾರಕಾ ಕಡೆಗೆ ಹೋಗಲು ಇ-ಬೈಕ್ ಬಾಡಿಗೆಗೆ ಪಡೆದಿದ್ದೆ. ಮನೆಗೆ ಹೋಗುತ್ತಿರುವಾಗ, ಸವಾರನು ತನ್ನ ಮೊಬೈಲ್ ಫೋನ್ ಅನ್ನು ಅವಳ ಕೈಯಲ್ಲಿ ಕೊಟ್ಟು ಜಿಪಿಎಸ್ ನಕ್ಷೆಯನ್ನು ಬಳಸಿ ದಿಕ್ಕನ್ನು ಹೇಳಲು ಹೇಳಿದ್ದಾನೆ. ತನಗೆ ಐಸ್‌ಕ್ರೀಂ ಕೊಡಿಸುವಂತೆ ಒತ್ತಾಯಿಸಿದ್ದಾನೆ. ಕೆಲವು ಕಿಲೋಮೀಟರ್ ಸವಾರಿ ಮಾಡಿದ ನಂತರ ಚಾಲಕ ತನ್ನ ಮೊಬೈಲ್ ಫೋನ್ ಅನ್ನು ಮಹಿಳೆಯಿಂದ ಹಿಂದಕ್ಕೆ ತೆಗೆದುಕೊಂಡು ರಾಂಗ್ ಟರ್ನ್ ತೆಗೆದುಕೊಂಡಿದ್ದಾನೆ. ಅದರ ಬಗ್ಗೆ ಕೇಳಿದಾಗ ಅದು ಶಾರ್ಟ್ ಕಟ್ ಎಂದು ಹೇಳಿದ್ದಾನೆ.
ನಂತರ ಏಕಾಂತ ಪ್ರದೇಶದಲ್ಲಿ ಬೈಕ್ ನಿಲ್ಲಿಸಿ ಮಹಿಳೆಯನ್ನು ಮರಗಳ ಕಡೆಗೆ ಎಳೆದೊಯ್ದು ಕಿರುಕುಳ ನೀಡಲು ಯತ್ನಿಸಿದ್ದು ಆಕೆ ಕೂಗಾಡಿದಾಗ ಹಲ್ಲೆ ನಡೆಸಿದ್ದಾನೆ. ಮಹಿಳೆ ಕಷ್ಟದಲ್ಲಿರುವುದನ್ನು ಗಮನಿಸಿದ ದಂಪತಿಗಳು ತಮ್ಮ ಕಾರನ್ನು ನಿಲ್ಲಿಸಿದ್ದಾರೆ. ಅವರನ್ನು ಕಂಡ ಚಾಲಕ ಓಡಿ ಹೋಗಿದ್ದಾನೆ. ಎರಡು ಹೆಲ್ಮೆಟ್‌ಗಳನ್ನು ಬಿಟ್ಟು ಪರಾರಿಯಾಗಿದ್ದಾನೆ. ದಂಪತಿಗಳು ಮಹಿಳೆಯನ್ನು ಮೆಟ್ರೋ ನಿಲ್ದಾಣದ ಬಳಿ ಇಳಿಸಿದ್ದಾರೆ. ಜೈವೀರ್ನ ಪೂರ್ವಾಪರವನ್ನು ಪರಿಶೀಲಿಸುತ್ತಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.