
1990ರ ದಶಕದ ಆರಂಭದಿಂದಲೂ ಪ್ರಪಂಚದಾದ್ಯಂತ ಈ ವಿಮಾನ ಹಾರುತ್ತಿದೆಯಾದರೂ, ಅದು ಇಲ್ಲಿಯವರೆಗೆ ಅಂಟಾರ್ಕ್ಟಿಕಾವನ್ನು ತಲುಪಿರಲಿಲ್ಲ. ಇದೀಗ ಮೊದಲ ಬಾರಿಗೆ, ಏರ್ಬಸ್ ಎ340 ಅಂಟಾರ್ಕ್ಟಿಕಾದ ಹಿಮಾವೃತ ಪ್ರದೇಶದ ಮೇಲೆ ಯಶಸ್ವಿಯಾಗಿ ಇಳಿದು ಇತಿಹಾಸ ನಿರ್ಮಿಸಿದೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.
ವರದಿಯ ಪ್ರಕಾರ, ನವೆಂಬರ್ 2 ರಂದು ದಕ್ಷಿಣ ಆಫ್ರಿಕಾದ ಕೇಪ್ ಟೌನ್ನಿಂದ ಹೊರಟ ವಿಮಾನವು ಅಂಟಾರ್ಕ್ಟಿಕಾದ ವುಲ್ಫ್ಸ್ ಫಾಂಗ್ ರನ್ವೇ ಎಂದು ಕರೆಯಲ್ಪಡುವ ನೀಲಿ ಗ್ಲೇಶಿಯಲ್ ಲ್ಯಾಂಡಿಂಗ್ ಸ್ಟ್ರಿಪ್ನಲ್ಲಿ ಇಳಿದಿದೆ. ಅಂಟಾರ್ಕ್ಟಿಕಾದಲ್ಲಿನ ಸಾಹಸ ಶಿಬಿರವಾದ ವುಲ್ಫ್ಸ್ ಫಾಂಗ್ ಈ ಐತಿಹಾಸಿಕ ಕಾರ್ಯಾಚರಣೆಯನ್ನು ನಿರ್ವಹಿಸಲು ಹೈ ಫ್ಲೈ ಅನ್ನು ನೇಮಿಸಿಕೊಂಡಿದೆ.
ಸಿ-ಲೆವೆಲ್ ವಿಮಾನ ನಿಲ್ದಾಣವಾಗಿರುವ ವುಲ್ಫ್ಸ್ ಫಾಂಗ್ ಬ್ಲೂ-ಐಸ್ ರನ್ವೇಯಲ್ಲಿ ವಿಮಾನವನ್ನು ಇಳಿಸಿದೆ. ವಿಮಾನವು ಸುಗಮವಾಗಿ ಸಾಗಿತು, ಆದರೆ ರನ್ ವೇ ಅನ್ನು ಗುರುತಿಸುವುದು ಅಷ್ಟು ಸುಲಭವಾಗಿರಲಿಲ್ಲ ಎಂದು ಪೈಲಟ್ ಕಾರ್ಲೋಸ್ ಮಿರ್ಪುರಿ ಹೇಳಿದ್ದಾರೆ.
ದೊಡ್ಡ ಜೆಟ್ ವಿಮಾನಗಳನ್ನು ಬಳಸುವ ಪ್ರಯಾಣಿಕರ ವಿಮಾನಗಳಿಗೆ ಭವಿಷ್ಯದಲ್ಲಿ ಅಂಟಾರ್ಕ್ಟಿಕಾಕ್ಕೆ ಪ್ರಯಾಣಿಸಲು ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಖಂಡವನ್ನು ತೆರೆಯಲು ಈ ಮೂಲಕ ದಾರಿ ಮಾಡಿಕೊಟ್ಟಿದೆ. ಅಂಟಾರ್ಕ್ಟಿಕಾದಲ್ಲಿ ಯಾವುದೇ ಅಧಿಕೃತ ವಿಮಾನ ನಿಲ್ದಾಣವಿಲ್ಲ, ಆದರೆ 50 ಲ್ಯಾಂಡಿಂಗ್ ಸ್ಟ್ರಿಪ್ಗಳು ಮತ್ತು ರನ್ವೇಗಳಿವೆ.