ದೇಶದಲ್ಲಿ ಡ್ರೋನ್‍ಗಳ ಬಳಕೆಯನ್ನು ವಾಣಿಜ್ಯ ಉದ್ದೇಶಗಳಿಗೆ ಹೆಚ್ಚಿಸಲು ಪೂರಕವಾದ ಹೊಸದಾದ ಮತ್ತು ಸರಳ ನಿಯಮಗಳಿಗೆ ನಾಗರಿಕ ವಿಮಾನಯಾನ ಸಚಿವಾಲಯವು ಗುರುವಾರ ಒಪ್ಪಿದೆ ನೀಡಿದೆ.
ಈ ಥರದ ಉತ್ತೇಜನದಿಂದಾಗಿ ಡ್ರೋನ್ ಟ್ಯಾಕ್ಸಿಗಳ ಬಗ್ಗೆ ಜನರಿಗಿರುವ ಕನಸು ಕೂಡ ಶೀಘ್ರವೇ ನನಸಾಗಲಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜ್ಯೋತಿರಾದಿತ್ಯ ಸಿಂಧಿಯಾರ 4000 ಕೋಟಿ ರೂ. ಮೌಲ್ಯದ ಅರಮನೆ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ
ಈಗಾಗಲೇ ವಿಶ್ವದ ಹಲವು ಸ್ಟಾರ್ಟ್ ಅಪ್‍ಗಳು ಏರ್ ಟ್ಯಾಕ್ಸಿ ತಂತ್ರಜ್ಞಾನದ ಮೇಲೆ ತೀವ್ರತರ ಸಂಶೋಧನೆ ನಡೆಸುತ್ತಿವೆ. ರಸ್ತೆಗಳಲ್ಲಿನ ಟ್ರಾಫಿಕ್ ಜ್ಯಾಮ್ ಸಮಸ್ಯೆ, ವಾಯುಮಾಲಿನ್ಯ ಹಾಗೂ ಸಂಚಾರಕ್ಕೆ ಹೆಚ್ಚಿನ ಸಮಯ ವ್ಯಯವಾಗುತ್ತಿರುವುದಕ್ಕೆಲ್ಲ ‘ಡ್ರೋನ್ ಟ್ಯಾಕ್ಸಿ’ ಪರಿಹಾರ ಎನ್ನಲಾಗುತ್ತಿದೆ.