alex Certify BIG NEWS : ಬೆಂಗಳೂರು ಏರ್ ಶೋ ನಲ್ಲಿ ಮೊಳಗಿದ ಯುವರತ್ನ ಚಿತ್ರದ ‘ಪವರ್ ಆಫ್ ಯೂಥ್ಸ್’ ಹಾಡು |WATCH VIDEO | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಬೆಂಗಳೂರು ಏರ್ ಶೋ ನಲ್ಲಿ ಮೊಳಗಿದ ಯುವರತ್ನ ಚಿತ್ರದ ‘ಪವರ್ ಆಫ್ ಯೂಥ್ಸ್’ ಹಾಡು |WATCH VIDEO

ಬೆಂಗಳೂರು: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಇಂದಿನಿಂದ ಏರೋ ಇಂಡಿಯಾ ಏರ್ ಶೋ -2025 ಆರಂಭವಾಗಿದ್ದು, ಇಂದಿನಿಂದ ಐದು ದಿನಗಳ ಕಾಲ ಲೋಹದ ಹಕ್ಕಿಗಳ ಹಾರಾಟ ಕಣ್ಮನಸೆಳೆಯಲಿವೆ.

ಯಲಹಂಕಾ ವಾಯುನೆಲೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸುತ್ತಿದ್ದಂತೆ ಭಾರತದ ಯುದ್ಧ ವಿಮಾನಗಳ ಹಾರಟ ಆರಂಭವಾಯಿಉ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಏರ್ ಶೋ ಗೆ ಚಾಲನೆ ನೀಡಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸೇನಾ ಮುಖ್ಯಸ್ಥರು ಮುಖ್ಯವೇದಿಕೆ ಮುಂಭಾಗ ಆಸೀನರಾಗುತ್ತಿದ್ದಂತೆ ಯುದ್ಧ ವಿಮಾನಗಳ ಹಾರಾಟ ಆರಂಭವಾಯಿತು.

ಈ ವೇಳೆ ಏರ್ ಶೋನಲ್ಲಿ ರಕ್ಷಣಾ ಇಲಾಖೆ ಯುವರತ್ನ ಸಿನಿಮಾದ ‘ಪವರ್ ಆಫ್ ಯೂಥ್ಸ್’ ಹಾಡು ಹಾಕಿ ಗಮನ ಸೆಳೆಯಿತು. ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನ ಆರಂಭವಾಗಿದ್ದು, ಲೋಹದ ಹಕ್ಕಿಗಳ ಕಲರವ ಕಣ್ಮನ ಸೆಳೆದಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...