ಬೆಂಗಳೂರು: ಬೆಂಗಳೂರಿನ ಯಲಹಂಕದ ಭಾರತೀಯ ವಾಯುನೆಲೆಯಲ್ಲಿ ಫೆಬ್ರವರಿ 3 ರಿಂದ 5 ರವರೆಗೆ ಏರೋ ಇಂಡಿಯಾ – 2021 ವೈಮಾನಿಕ ಪ್ರದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇಂದಿನಿಂದ ಏರ್ ಶೋ ತಾಲೀಮು ಶುರುವಾಗಲಿದೆ. ಏರೋ ಇಂಡಿಯಾದಲ್ಲಿ ಭಾರತ ಸೇರಿದಂತೆ ಅನೇಕ ದೇಶಗಳ 63 ಏರ್ ಕ್ರಾಫ್ಟ್, ಕಾಪ್ಟರ್ ಪ್ರದರ್ಶನಗೊಳ್ಳಲಿವೆ. 42 ವಿಮಾನಗಳು ದಿನದಲ್ಲಿ ಎರಡು ಸಲ ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ ನೀಡಲಿವೆ. ರಫೆಲ್, ಸುಖೋಯ್, ಜಾಗ್ವಾರ್ ಸೇರಿದಂತೆ ಅನೇಕ ಫೈಟರ್ ಜೆಟ್ ಏರ್ ಕ್ರಾಫ್ಟ್ ಹೆಲಿಕಾಪ್ಟರ್ ಗಳಿಂದ ಪ್ರದರ್ಶನ ನಡೆಯಲಿದೆ.
ಇದೇ ಮೊದಲ ಬಾರಿಗೆ ಸೂರ್ಯಕಿರಣ್ ಮತ್ತು ಸಾರಂಗ್ ವೈಮಾನಿಕ ಪ್ರದರ್ಶನ ತಂಡಗಳು ಜಂಟಿಯಾಗಿ ಪ್ರದರ್ಶನ ನೀಡಲಿದ್ದು, ವರ್ಚುಯಲ್ ಮತ್ತು ಪ್ರತ್ಯಕ್ಷವಾಗಿ ಶೋ ನಡೆಯಲಿದೆ. ಕೊರೋನಾ ಮತ್ತು ಕಳೆದ ಭಾರಿ ಅಗ್ನಿ ಅವಘಡದ ಹಿನ್ನಲೆಯಲ್ಲಿ ಭಾರೀ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪ್ರದರ್ಶನ ಆಯೋಜಿಸಲಾಗ್ತಿದೆ.