ನವದೆಹಲಿ: ಭಾರತೀಯರ ಜೀವಿತಾವಧಿ ಒಂದು ವರ್ಷ ಏರಿಕೆಯಾಗಿದೆ. 2002ರಲ್ಲಿ ಭಾರತದಲ್ಲಿ ವಾಯುಮಾಲಿನ್ಯ ಪ್ರಮಾಣ ಶೇಕಡ 19.3ರಷ್ಟು ಕುಸಿತವಾಗಿದೆ. ಇದರ ಪರಿಣಾಮವಾಗಿ ಭಾರತೀಯರ ಜೀವಿತಾವಧಿ ಸರಾಸರಿ ಒಂದು ವರ್ಷ ಏರಿಕೆಯಾಗಿದೆ ಎಂದು ವಾಯು ಗುಣಮಟ್ಟ ಜೀವನ ಸೂಚ್ಯಂಕ ವರದಿ ತಿಳಿಸಿದೆ.
ಷಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಸಂಸ್ಥೆ ಈ ಕುರಿತಾದ ವರದಿಯನ್ನು ಬಿಡುಗಡೆ ಮಾಡಿದೆ. ಇದೆ ವೇಳೆ ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಪಡಿಸಿರುವ ವಾಯುಗುಣಮಟ್ಟವನ್ನು ಭಾರತ ತಲುಪದೆ ಹೋದಲ್ಲಿ ಭಾರತೀಯರ ಜೀವಿತಾವಧಿ ಸರಾಸರಿ 3.6 ವರ್ಷ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.
2022ರಲ್ಲಿ ಭಾರತ ಮತ್ತು ಇತರ ಏಷ್ಯಾ ದೇಶಗಳಲ್ಲಿ ದಾಖಲಾದ ಹವಾಮಾನ ವಾಯುಮಾಲಿನ್ಯ ಕಡಿತಕ್ಕೆ ಕಾರಣವಾಗಿದೆ. 2022 ರಲ್ಲಿ ಭಾರತದಲ್ಲಿ ಪ್ರತಿ ಕ್ಯೂಬಿಕ್ ಮೀಟರ್ ಪ್ರದೇಶದಲ್ಲಿ ಪಿಎಂ 2.5 ಸಾಂದ್ರತೆ ಪ್ರಮಾಣವು 9 ಮೈಕ್ರೋಗ್ರಾಂನಷ್ಟು ಇತ್ತು. ಇದು 2021 ಕ್ಕೆ ಹೋಲಿಕೆ ಮಾಡಿದರೆ ಶೇಕಡ 19.3 ರಷ್ಟು ಕಡಿಮೆಯಾಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಅತಿ ಹೆಚ್ಚು ವಾಯುಮಾಲಿನ್ಯ ವರದಿಯಾಗಿದ್ದು, ಪಶ್ಚಿಮ ಬಂಗಾಳದ ಪುರುಲಿಯಾ ಮತ್ತು ಬಂಕುರ ಜಿಲ್ಲೆಗಳಲ್ಲಿ ಮಾಲಿನ್ಯದ ಪ್ರಮಾಣ ಕಡಿಮೆಯಾಗಿದೆ. ಧನ್ಬಾದ್, ಪುರ್ಬಿ, ಪಶ್ಚಿಮ್ ಸಿಂಗ್ಭೂಮ್, ಪಶ್ಚಿಮ್ ಮೆದಿನಿಪುರ್ ಮತ್ತು ಜಾರ್ಖಂಡ್‌ನ ಬೊಕಾರೊ. ಈ ಪ್ರತಿಯೊಂದು ಜಿಲ್ಲೆಗಳಲ್ಲಿ PM2.5 ಮಟ್ಟವು ಪ್ರತಿ ಘನ ಮೀಟರ್‌ಗೆ 20 ಮೈಕ್ರೋಗ್ರಾಂಗಳಷ್ಟು ಕಡಿಮೆಯಾಗಿದೆ. ಬೆಚ್ಚಗಿನ ಗಾಳಿಯ ಪದರವು ನೆಲದ ಬಳಿ ತಂಪಾದ ಗಾಳಿಯನ್ನು ಹಿಡಿದಿಟ್ಟುಕೊಳ್ಳುವ ಘಟನೆಗಳು ಮಾಲಿನ್ಯಕಾರಕಗಳ ಶೇಖರಣೆಗೆ ಕಾರಣವಾಗುತ್ತವೆ.