alex Certify ಮರುಪಾವತಿ ಮೊತ್ತದಲ್ಲಿ ಏರ್‌ ಇಂಡಿಯಾದಿಂದ ಇನ್ನೂ 250 ಕೋಟಿ ರೂಪಾಯಿ ಬಾಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರುಪಾವತಿ ಮೊತ್ತದಲ್ಲಿ ಏರ್‌ ಇಂಡಿಯಾದಿಂದ ಇನ್ನೂ 250 ಕೋಟಿ ರೂಪಾಯಿ ಬಾಕಿ

ಕೋವಿಡ್​ 19 ಕಾರಣದಿಂದಾಗಿ ರದ್ದಾದ ವಿಮಾನಗಳಿಂದಾಗಿ ಪ್ರಯಾಣಿಕರಿಗೆ ಮರುಪಾವತಿ ಮಾಡಬೇಕಾದ ಮೊತ್ತದಲ್ಲಿ ಏರ್​ ಇಂಡಿಯಾ ಇನ್ನೂ 250 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ.

ಕೊರೊನಾದಿಂದಾಗಿ ಆದಾಯ ಸಂಪೂರ್ಣ ನೆಲಕಚ್ಚಿದ್ದರೂ ಸಹ ಜುಲೈ ತಿಂಗಳಿನಿಂದ ಪ್ರಯಾಣಿಕರಿಗೆ ಟಿಕೆಟ್​ ದರ ಮರುಪಾವತಿ ಪ್ರಕ್ರಿಯೆ ನಡೆಯಲಿದೆ ಎಂದು ಏರ್​ ಇಂಡಿಯಾ ಹೇಳಿತ್ತು.

ಏರ್​ ಇಂಡಿಯಾ ಭಾರತ ಹಾಗೂ ವಿದೇಶಗಳಲ್ಲಿ ಮರುಪಾವತಿ ಪ್ರಕ್ರಿಯೆಯನ್ನು ಈಗಾಗಲೇ ಶುರು ಮಾಡಿದೆ. ಪ್ರಸ್ತುತ 130 ಕೋಟಿ ರೂಪಾಯಿ ಹಣ ಹಿಂದಿರುಗಿಸಲಾಗಿದ್ದು ಈ ಪ್ರಕ್ರಿಯೆ ಇನ್ನೂ ಮುಂದುವರಿಯಲಿದೆ ಎಂದು ಏರ್​ ಇಂಡಿಯಾ ಏರ್​ಲೈನ್​ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದೆ.

ಕಳೆದ ವರ್ಷದಲ್ಲಿ ರದ್ದಾದ ವಿಮಾನಗಳ ಮರುಪಾವತಿಯನ್ನು ಪೂರ್ಣಗೊಳಿಸಲಾಗಿದೆ ಎಂದು ಇಂಡಿಗೋ ಏರ್​ಲೈನ್ಸ್​ ಮಾಹಿತಿ ನೀಡಿದೆ.

ಕೊರೊನಾದ ಆರಂಭದಲ್ಲಿ ಲಾಕ್​ಡೌನ್​ ಹಾಗೂ ಪ್ರಯಾಣ ನಿರ್ಬಂಧಗಳು ಏಕಾಏಕಿ ಜಾರಿ ಬಂದ ಹಿನ್ನೆಲೆಯಲ್ಲಿ ಅನೇಕ ವಿಮಾನಯಾನ ಸೇವೆ ರದ್ದಾಗಿದ್ದವು. ಇದರಿಂದಾಗಿ ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಯೋಜನೆಯನ್ನು ಅನಿವಾರ್ಯವಾಗಿ ಮುಂದೂಡಬೇಕಾಗಿ ಬಂದಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...