ಏರ್ ಬಸ್ ನಂತರ, ಬೋಯಿಂಗ್‌ನಿಂದ 220 ವಿಮಾನಗಳನ್ನು ಖರೀದಿಸಲು ಏರ್ ಇಂಡಿಯಾ ಒಪ್ಪಂದ ಮಾಡಿಕೊಂಡಿರುವುದನ್ನು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಶ್ಲಾಘಿಸಿದ್ದು, ಐತಿಹಾಸಿಕ ಒಪ್ಪಂದ ಎಂದು ಹೇಳಿದ್ದಾರೆ.
ಏರ್‌ಬಸ್‌ನಿಂದ 250 ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರವನ್ನು ಹಿಂದಿನ ದಿನ ಘೋಷಿಸಿದ ಏರ್ ಇಂಡಿಯಾ, ಬೋಯಿಂಗ್‌ನಿಂದ 220 ವಿಮಾನಗಳನ್ನು ಖರೀದಿಸಲಿದೆ.
ಬೃಹತ್ ಪ್ರಮಾಣದಲ್ಲಿ ಕಾರ್ಯಾಚರಣೆ ವಿಸ್ತರಿಸಲು ಪ್ಲಾನ್ ಮಾಡಿಕೊಂಡಿರುವ ಏರ್ ಇಂಡಿಯಾ 220 ವಿಮಾನಗಳಿಗಾಗಿ ಅಮೆರಿಕದ ವಿಮಾನ ತಯಾರಕ ಬೋಯಿಂಗ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಫ್ರೆಂಚ್ ವಿಮಾನ ತಯಾರಕ ಏರ್ ಬಸ್‌ನೊಂದಿಗೆ ಭಾರತೀಯ ವಿಮಾನಯಾನ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಕೆಲವೇ ಗಂಟೆಗಳ ನಂತರ ಈ ಒಪ್ಪಂದವನ್ನು ಅಧಿಕೃತಗೊಳಿಸಲಾಯಿತು.
ಯುಎಸ್ ಅಧ್ಯಕ್ಷ ಜೋ ಬಿಡನ್ ಬೋಯಿಂಗ್ ಜೊತೆಗಿನ ಒಪ್ಪಂದವನ್ನು “ಐತಿಹಾಸಿಕ ಒಪ್ಪಂದ” ಎಂದು ಶ್ಲಾಘಿಸಿದ್ದಾರೆ.
ಏರ್ ಇಂಡಿಯಾ-ಬೋಯಿಂಗ್ ಒಪ್ಪಂದವು ಸುಮಾರು 500 ಹೊಸ ವಿಮಾನಗಳ ಮೆಗಾ ಒಪ್ಪಂದದ ಭಾಗವಾಗಿದೆ. ವಿಶ್ವದಲ್ಲೇ ಅತಿ ದೊಡ್ಡ ವಿಮಾನಯಾನ ಒಪ್ಪಂದದೊಂದಿಗೆ ಕಾರ್ಯಾಚರಣೆ ವಿಸ್ತರಿಸುವ ಏರ್ ಇಂಡಿಯಾದ ಕ್ರಮವನ್ನು ಯುಕೆ ಪ್ರಧಾನಿ ರಿಷಿ ಸುನಕ್ ಸಹ ಶ್ಲಾಘಿಸಿದ್ದಾರೆ.