ಹಿರಿಯ ನಾಗರಿಕರಿಗೆ ವಿಮಾನ ಪ್ರಯಾಣದ ಟಿಕೆಟ್ ದರದಲ್ಲಿ 50% ರಿಯಾಯಿತಿಯನ್ನು ಏರ್ ಇಂಡಿಯಾ ಪರಿಚಯಿಸಿದೆ. ಈ ಆಫರ್ ಅಡಿಯಲ್ಲಿ, ಫ್ಲೈಟ್ ಟಿಕೆಟ್ ದರದ ಮೂಲ ಬೆಲೆಯಲ್ಲಿ 50% ವಿನಾಯಿತಿ ನೀಡಲಾಗುವುದು.
ಉತ್ತಮ ಸ್ಥಿತಿಯ ‘ನಿವೃತ್ತಿ’ ಜೀವನ ಬಯಸುವ ಹಿರಿಯ ನಾಗರಿಕರಿಗೆ ಇಲ್ಲಿದೆ ಮಹತ್ವದ ಸಲಹೆ
ಏರ್ ಇಂಡಿಯಾದ ತನ್ನ ವಾಣಿಜ್ಯ ವಿಮಾನಗಳನ್ನು ಕಾರ್ಯಾಚರಿಸುವ ಮಾರ್ಗಗಳಲ್ಲಿ ಈ ಆಫರ್ ಅನ್ವಯವಾಗಲಿದೆ. ಕನಿಷ್ಠ ಮೂರು ದಿನಗಳ ಮುಂಚೆಯೇ ಟಿಕೆಟ್ ಪಡೆಯುವ ಹಿರಿಯ ನಾಗರಿಕರು ಈ ಆಫರ್ ಅನುಭವಿಸಬಹುದು. 60 ವರ್ಷ ಮೇಲ್ಪಟ್ಟ ಎಲ್ಲಾ ಭಾರತೀಯರಿಗೂ ಈ ಆಫರ್ ಅನ್ವಯವಾಗಲಿದೆ.
ಕ್ರೇಟಾ, ಸೆಲ್ಟೋಸ್‌ಗೆ ಪ್ರತಿಸ್ಪರ್ಧಿಯಾಗಿ ಟಾಟಾದಿಂದ ಬರುತ್ತಿದೆ ಮತ್ತೊಂದು ಎಸ್‌ಯುವಿ
ಡಿಸೆಂಬರ್ 2020ರಲ್ಲಿ ಜಾರಿಗೆ ಬಂದ ಈ ಸ್ಕೀಂನಲ್ಲಿ ಫೋಟೋ ಸಹಿತ ಗುರುತಿನ ದಾಖಲೆಗಳನ್ನು ಪ್ರಸ್ತುತಪಡಿಸುವ ಹಿರಿಯ ನಾಗರಿಕರಿಗೆ ಮಾತ್ರವೇ ವಿನಾಯಿತಿ ನೀಡಲಾಗುವುದು. ತನ್ನ ವಿಮಾನಗಳಲ್ಲಿ ಡಿಸೆಂಬರ್ 2021ರವರೆಗೂ ಕಾರ್ಯಾಚರಿಸಲು ಏರ್ ಇಂಡಿಯಾ ನಿರ್ಧರಿಸಿದೆ.
http://www.airindia.in/senior-citizen-concession.html ಪೋರ್ಟಲ್‌ಗೆ ಭೇಟಿ ಕೊಟ್ಟು ಈ ವಿನಾಯಿತಿಯ ಆಫರ್‌ಗಳ ನಿಯಮಗಳನ್ನು ಅರಿಯಬಹುದಾಗಿದೆ.