ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನದಿಂದ ಲೋಹದ ವಸ್ತುಗಳು ಮನೆಯ ಮೇಲೆ ಬಿದ್ದಿರುವ ಘಟನೆ ನಡೆದಿದ್ದು, ಆತಂಕಕ್ಕೆ ಕಾರಣವಾಗಿದೆ.
ತಕ್ಷಣ ಮನೆಯ ಮಾಲೀಕ ಪೊಲೀಸರಿಗೆ ಹಾಗೂ ವಿಮಾನಯಾನ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಸೆ.2ರಂದು ರಾತ್ರಿ 9:30ರ ಸುಮಾರಿಗೆ ಈ ಘಟನೆ ನಡೆದಿದೆ. ವಿಮಾನ ವಸಂತ್ ಕುಂಜ್ ಪ್ರದೇಶದಿಂದ ಹೊರಡುವಾಗ ಅದರ ಕೆಲ ತುಣುಕುಗಳು ಆ ಪ್ರದೇಶದ ಮನೆಯೊಂದರ ಮೇಲೆ ಬಿದ್ದಿವೆ. ಈ ಬಗ್ಗೆ ನಾಗರಿಕ ವಿಮನಯಾನ ಮಹಾನಿರ್ದೇಶನಾಲಯ ತನಿಖೆಗೆ ಆದೇಶಿಸಿದೆ.
ಸೋಮವಾರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಏರ್ ಇಂಡುಇಯಾ ವಿಮಾನದಿಂದ ಈ ವಸ್ತುಗಳು ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ವಿಮಾನದ ಎಂಜೀನ್ ನಿಂದ ಮುರಿದ ಬ್ಲೇಡ್ ಭಾಗ, ಲೋಹದ ತುಂಡುಗಳು ಆಗಿರಬಹುದು ಎಂದು ಶಂಕಿಸಲಾಗಿದೆ ಆದರೆ ಖಚಿತಪಟ್ಟಿಲ್ಲ.
ಸದ್ಯದ ಮಾಹಿತಿ ಪ್ರಕಾರ ಏರ್ ಇಂದಿಯಾ ಎಕ್ಸ್ ಪ್ರೆಸ್ ವಿಮಾನ IX-145 ನ ಭಾಗ ಎಂದು ತಿಳಿದುಬಂದಿದೆ. ವಿಮನದಲ್ಲಿದ್ದ ಎಲ್ಲಾ ಪ್ರಯಾಣಿಕರು ಅದೃಷ್ಟವಶಾತ್ ಸುರಕ್ಷಿತರಾಗಿದ್ದಾರೆ.