ಮುಂಬೈ: ಇತ್ತೀಚಿನ ದಿನಗಳಲ್ಲಿ ತನ್ನ ವಿಮಾನಗಳ ವಿಳಂಬಕ್ಕಾಗಿ ಸುದ್ದಿಯಲ್ಲಿರುವ ಏರ್ ಇಂಡಿಯಾ ಭಾನುವಾರ ಹೊಸ ಬಿಕ್ಕಟ್ಟನ್ನು ಎದುರಿಸಿದೆ.
ವಿಮಾನಯಾನ ಸಂಸ್ಥೆಯ ಮುಂಬೈನಿಂದ ದೆಹಲಿ ಮಾರ್ಗದ ವಿಮಾನ ಸಂಖ್ಯೆ AI2994 ರನ್ ವೇಯಲ್ಲಿ ದೀರ್ಘಕಾಲ ನಿಲ್ಲುವಂತೆ ಮಾಡಿತು. ಟರ್ಮಿನಲ್ 2 ರಿಂದ ಭಾನುವಾರ ಬೆಳಿಗ್ಗೆ 10:25 ಕ್ಕೆ ವಿಮಾನ ಹೊರಡಬೇಕಿತ್ತು. ಮಧ್ಯಾಹ್ನ 1:30 ರವರೆಗೆ ಏರ್ ಇಂಡಿಯಾ ವಿಮಾನವು ರನ್‌ವೇಯಲ್ಲಿ ಸಿಲುಕಿಕೊಂಡಿತು, ಪ್ರಯಾಣಿಕರಿಗೆ ಹಸಿವು ಮತ್ತು ಬಾಯಾರಿಕೆಯಾದ ಕಾರಣ ಚಡಪಡಿಸಿದ್ದಾರೆ. ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಮಧ್ಯಾಹ್ನ 1:30 ಕ್ಕೆ ಆಹಾರವನ್ನು ನೀಡಲಾಯಿತು. ಆದರೆ, ಇದು ಬೆಳಿಗ್ಗೆ ವಿಮಾನದಲ್ಲಿ ರೆಡಿ ಮಾಡಿದ ಉಪಹಾರದಂತೆಯೇ ಇತ್ತು. ಬೆಳಗಿನ ಉಪಾಹಾರ ಪ್ಯಾಕೆಟ್‌ಗಳನ್ನು ವಿತರಿಸಲಾಗಿದ್ದರೂ, ವಿಮಾನಯಾನ ಸಂಸ್ಥೆಗಳು ತಕ್ಷಣ ಪ್ರಯಾಣಿಕರನ್ನು ಟರ್ಮಿನಲ್ ಲಾಂಜ್‌ಗೆ ಕರೆದೊಯ್ಯಲಿಲ್ಲ.
ಏರ್ ಇಂಡಿಯಾ ವಿಮಾನದೊಳಗಿನ ವೀಡಿಯೊದಲ್ಲಿ ಪ್ರಯಾಣಿಕರು ಕಾದು ಕಾದು ತಾಳ್ಮೆ ಕಳೆದುಕೊಂಡಿರುವುದನ್ನು ತೋರಿಸಿದೆ. ಅನೇಕ ಪ್ರಯಾಣಿಕರು ನಿಂತುಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಪ್ರಯಾಣಿಕರು ಏರ್ ಇಂಡಿಯಾ ವಿಮಾನದಲ್ಲಿದ್ದರು ಎನ್ನಲಾಗಿದೆ.