alex Certify ಜ. 22 ರಿಂದ ಬೆಂಗಳೂರಿನಿಂದ ಮುಂಬೈಗೆ ಏರ್ ಇಂಡಿಯಾ ಅತ್ಯಾಧುನಿಕ ಎ-350 ವಿಮಾನ ಹಾರಾಟ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜ. 22 ರಿಂದ ಬೆಂಗಳೂರಿನಿಂದ ಮುಂಬೈಗೆ ಏರ್ ಇಂಡಿಯಾ ಅತ್ಯಾಧುನಿಕ ಎ-350 ವಿಮಾನ ಹಾರಾಟ ಆರಂಭ

ನವದೆಹಲಿ: ಏರ್ ಇಂಡಿಯಾ ಖರೀದಿಸಿದ ಅತ್ಯಾಧುನಿಕ ಎ350- 900 ವಿಮಾನ ಜನವರಿ 22ರಂದು ಸಾರ್ವಜನಿಕ ಹಾರಾಟ ಆರಂಭಿಸಲಿದೆ.

ಬೆಂಗಳೂರಿನಿಂದ ಮುಂಬೈಗೆ ಮೊದಲ ವಿಮಾನ ಸಂಚಾರ ಆರಂಭವಾಗಲಿದೆ. ಸೋಮವಾರದಿಂದಲೇ ಮುಂಗಡ ಟಿಕೆಟ್ ಬುಕಿಂಗ್ ಆರಂಭವಾಗಿದೆ. ಈ ವಿಮಾನದಲ್ಲಿ 28 ಬಿಸಿನೆಸ್ ಕ್ಲಾಸ್, 24 ಪ್ರೀಮಿಯಂ ಎಕಾನಮಿ ಕ್ಲಾಸ್, 264 ಎಕಾನಮಿ ಕ್ಲಾಸ್ ಆಸನಗಳಿವೆ.

ಮೊದಲಿಗೆ ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಮುಂಬೈ ಮಹಾನಗರಗಳಿಂದ ಸಂಚಾರ ಆರಂಭವಾಗಲಿದ್ದು, ವಿದೇಶಿ ಮಾರ್ಗಗಳಿಗೆ ನಂತರ ಈ ವಿಮಾನ ಸಂಚಾರ ಆರಂಭಿಸಲಿದೆ. ಏರ್ ಇಂಡಿಯಾ ಖರೀದಿಸಿರುವ ಅತ್ಯಾಧುನಿಕ 20 ಎ350-900 ಸರಣಿಯ ವಿಮಾನಗಳು ಡಿ.23 ರಂದು ದೆಹಲಿಗೆ ಬಂದಿಳಿದಿದ್ದವು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...