ನವದೆಹಲಿ: ಏರ್ ಇಂಡಿಯಾ ಸಂಸ್ಥೆ ಗಗನಸಖಿಯರು ಸೇರಿದಂತೆ 30 ಸಿಬ್ಬಂದಿಗಳನ್ನು ದಿಢೀರ್ ಕೆಲಸದಿಂದ ತೆಗೆದುಹಾಕುವ ಮೂಲಕ ಶಾಕ್ ನೀಡಿದೆ.
ಮೇ 8ರಂದು ಬುಧವಾರ ಏರ್ ಇಂಡಿಯಾ ಎಕ್ಸ್ ಪ್೦ರೆಸ್ ನ 300 ಉದ್ಯೋಗಿಗಳು ಸಾಮೂಹಿಕವಾಗಿ ಸಿಕ್ ಲೀವ್ ಪಡೆದಿದ್ದರು. ಅಲ್ಲದೇ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದರು. ಇದರಿಂದಾಗಿ ನಿನ್ನೆ ಬರೋಬ್ಬರಿ 76 ವಿಮಾನ ಹಾರಾಟ ರದ್ದಾಗಿತ್ತು ಎನ್ನಲಾಗಿದೆ.
300 ಸಿಬ್ಬಂದಿಗಳು ಏಕಾಏಕಿ ಸಾಮೂಹಿಕ ರಜೆ ತೆಗೆದುಕೊಂಡ ಕಾರಣಕ್ಕೆ ಏರ್ ಇಂಡಿಯಾ ಸಂಸ್ಥೆ 30 ಜನರನ್ನು ಕೆಲಸದಿಂದ ವಜಾಗೊಳಿಸಿದ್ದು, ಇನ್ನೂ ಹಲವರಿಗೆ ನೋಟಿಸ್ ನೀಡಿದೆ.
ಏರ್ ಇಂಡಿಯಾದ ಹೊಸ ಉದ್ಯೋಗ ನಿಯಮಗಳ ಬಗ್ಗೆ ಸಿಬ್ಬಂದಿಗಳು ಅಸಮಾಧಾನಗೊಂಡಿದ್ದಾರೆ. ವೇತನ ಕಡಿತ, ಹಿರಿಯ ಹುದ್ದೆಗೆಂದು ಸಂದರ್ಶನ ನಡೆಸಿ ಕಿರಿಯ ಹುದ್ದೆ ನೀಡುವುದು ಸೇರಿದಂತೆ ಕೆಲ ಆರೋಪಗಳು ಕೇಳಿಬರುತ್ತಿವೆ. ಇದರಿಂದ ಸಿಬ್ಬಂದಿಗಳು ಪ್ರತಿಭಟನೆ ನಿಟ್ಟಿನಲ್ಲಿ ಸಾಮೂಹಿಕ ರಜೆ ಹಾಕಿದ್ದರು ಎನ್ನಲಾಗಿದೆ.