
ಬೆಂಗಳೂರು: ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವಿದೇಶಿ ಪ್ರಜೆಯನ್ನು ದೇವನಹಳ್ಳಿ ಪೊಲೀಸರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಅಕ್ರಂ ಅಹ್ಮದ್ ಬಂಧಿತ ಆರೋಪಿ. ಅಕ್ರಮ್ ಅಹ್ಮದ್ ಇಂಡಿಗೋ ವಿಮಾನದಲ್ಲಿ ಮಾಲ್ಡಿವ್ಸ್ ನಿಂದ ಬೆಂಗಳೂರಿಗೆ ಬಿಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ಗಗನಸಖಿಗೆ ಕಿರುಕುಳ ನೀಡಿದ್ದ.
ಗಗನಸಖಿಗೆ ಆರೋಪಿ ನಿನ್ನ ರೇಟ್ ಎಷ್ಟು? ಎಷ್ಟು ಡಾಲರ್ ಕೊಟ್ಟರೆ ಬರುತ್ತೀಯಾ? ನೂರು ಡಾಲರ್ ಗೆ ಬರುತ್ತೀಯಾ? ಎಂದು ಕೇಳಿದ್ದಾನೆ. ಅಲ್ಲದೇ ಗಗನಸಖಿಯ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ.
ಘಟನೆ ಸಂಬಂಧ ಗಗನಸಖಿ ದೇವನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಅಕ್ರಮ್ ಅಹ್ಮದ್ ನನ್ನು ಪೊಲೀಸರು ಬಂಧಿಸಿದ್ದಾರೆ.